Daily Horoscope
✕

ಕೆಜಿಎಫ್ 1 ಬಿಡುಗಡೆಯಾಗಿ ಐದು ವರ್ಷ: ರಾಕಿ ಭಾಯಿ ನೆನೆಸಿಕೊಂಡ ಫ್ಯಾನ್ಸ್

Webdunia
ಗುರುವಾರ, 21 ಡಿಸೆಂಬರ್ 2023 (09:51 IST)
ಬೆಂಗಳೂರು: ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿ ಕೆಜಿಎಫ್ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿ ಇಂದಿಗೆ ಐದು ವರ್ಷವಾಗಿದೆ.

2018 ರ ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಸ್ಯಾಂಡಲ್ ವುಡ್ ಗೆ ಹಲವು ಪ್ರಥಮಗಳ ದಾಖಲೆ ತಂದುಕೊಟ್ಟ ಸಿನಿಮಾ ಇದು. ಜೊತೆಗೆ ಯಶ್ ಎಂಬ ನಟ ರಾಕಿ ಭಾಯಿ ಆಗಿ ನ್ಯಾಷನಲ್ ಸ್ಟಾರ್ ಆದ ದಿನ.

ಕೆಜಿಎಫ್ ಸಿನಿಮಾ ಮೊದಲ ಬಾರಿಗೆ ಕನ್ನಡದಲ್ಲಿ 100 ಕೋಟಿ ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯಿತು. ಜೊತೆಗೆ ಮೊದಲ ದಿನವೇ ಸುಮಾರು 20 ಕೋಟಿ ಸನಿಹ ಗಳಿಕೆ ಮಾಡಿತ್ತು.

ಅಲ್ಲಿಯವರೆಗೆ ಕನ್ನಡ ಸಿನಿಮಾಗಳು ಕೇವಲ ಕನ್ನಡಕ್ಕಷ್ಟೇ ಸೀಮಿತವಾಗಿತ್ತು. ಆದರೆ ಹಿಂದಿಯಲ್ಲೂ ಬಾಲಿವುಡ್ ಸಿನಿಮಾಗಳನ್ನೂ ಸೋಲಿಸಿ ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ಹೆಗ್ಗಳಿಕೆ ಕೆಜಿಎಫ್ 1 ಸಿನಿಮಾದ್ದು. ಇನ್ನು, ಕೆಜಿಎಫ್ 1 ಬಿಡುಗಡೆಯಾಗಿ ಐದು ವರ್ಷವಾದ ಹಿನ್ನಲೆಯಲ್ಲಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ರಾಕಿ ಭಾಯಿಯನ್ನು ನೆನೆಸಿಕೊಂಡಿದ್ದು, ಶುಭಾಶಯ ಕೋರುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments