ನಟಿ ಸುಷ್ಮಾ ರಾವ್ ಅವರು ಮೊದಲ ಬಾರಿ ತಮ್ಮ ಕುಟುಂಬವನ್ನು ಕಲರ್ಸ್ ಕನ್ನಡ ವೇದಿಕೆಯಲ್ಲಿ ಪರಿಚಯಿಸಿದ್ದಾರೆ. ಕಲಾ ಬದುಕಿನಲ್ಲಿ 25ವರ್ಷವನ್ನು ಪೂರೈಸಿರುವ ಸುಷ್ಮಾಗೆ ಕಲರ್ಸ್ ಕನ್ನಡದ ಅನುಬಂಧ ವೇದಿಕೆಯಲ್ಲಿ ವಿಶೇಷ ಗೌರವನ್ನು ನೀಡಿ ಗೌರವಿಸಲಾಯಿತು.
ಈ ವೇದಿಕೆಗೆ ಸುಷ್ಮಾಗೆ ಸರ್ಪ್ರೈಸ್ ಆಗಿ ಅವರ ಪತಿ ಹಾಗೂ ಮಗನನ್ನು ಕರೆಸಿಕೊಳ್ಳಲಾಗಿತ್ತು. ಈ ವೇಳೆ ನಟಿ ಎಲ್ಲರಿಗೂ ತಮ್ಮ ಮಗ ಹಾಗೂ ಪತಿಯನ್ನು ಪರಿಚಯಿಸಿದ್ದಾರೆ. ಈ ವೇಳೆ ಸುಷ್ಮಾರ ಬಗ್ಗೆ ಅವರ ಮಗ ಹಾಗೂ ಪತಿಯ ಬಳಿ ನಿರೂಪಕ ಸೃಜನ್ ಲೋಕೇಶ್ ಪ್ರಶ್ನೆ ಕೇಳಿ ಕಾಲೆಳೆದಿದ್ದಾರೆ. ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
ಪ್ರೋಮೋ ನೋಡಿದ ಮಂದಿ ಶಾಕ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಸುಷ್ಮಾ ಅವರು ಇದುವರೆಗೆ ತಮ್ಮ ದಾಂಪತ್ಯ ಜೀವನ ಬಗ್ಗೆ ಹೇಳಿಕೊಂಡಿರುವುದಾಗಿ, ಪೋಸ್ಟ್ ಹಾಕಿಕೊಂಡಿರುವುದಾಗಿ ಮಾಡಿಲ್ಲ. ಇದೀಗ ಒಮ್ಮಲೇ ಬೆಳೆದು ನಿಂತ ಮಗನನ್ನು ಪರಿಚಯಿಸಿ, ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ನೆಟ್ಟಿಗರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಕಮೆಂಟ್ಸ್‌ನಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಸುಷ್ಮಾ ಒಂಟಿ ಅನ್ಕೊಂಡ್ಬಿಟ್ಟಿದ್ದು, ಮತ್ತೆ ಮದುವೆ, ಮಗ ಈಗಲೇ ಗೊತ್ತಾಗಿದ್ದು. ಒಳ್ಳೆ ಸಿಂಪಲ್ ಮಹಿಳೆ ಸುಷ್ಮಾ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಮತ್ತೊಬ್ಬರು ಇದು ನಿಜಾನಾ, ಯಾವಾಗ ಇವರಿಗೆ ಮದುವೆ ಆಯಿತು. ಅವರು ಎಲ್ಲೂ ಹೇಳಿಲ್ವಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಟಾಪ್ ಸೀರಿಯಲ್‌ಗಳಲ್ಲಿ ಒಂದಾಗಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ನಾಯಕಿ ಸುಷ್ಮಾ ರಾವ್ ಅವರು ಭಾಗ್ಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.