Select Your Language

Notifications

webdunia
webdunia
webdunia
webdunia

ನಟ ಅರುಣ್ ಸಾಗರ್ ಗೋಡೌನ್ ಗೆ ಬೆಂಕಿ; ಅಪಾರ ಪ್ರಮಾಣದ ನಷ್ಟ

ನಟ ಅರುಣ್ ಸಾಗರ್ ಗೋಡೌನ್ ಗೆ ಬೆಂಕಿ; ಅಪಾರ ಪ್ರಮಾಣದ ನಷ್ಟ
Bangalore , ಶುಕ್ರವಾರ, 17 ಫೆಬ್ರವರಿ 2017 (09:15 IST)
ಬೆಂಗಳೂರು: ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಅವರ ಶೂಟಿಂಗ್ ಗೋಡೌನ್ ಗೆ ಬೆಂಕಿ ತಗಲಿ ಅಪಾರ ಪ್ರಮಾಣದ ನಷ್ಟವಾಗಿರುವ ವರದಿಯಾಗಿದೆ. ಸುಬ್ರಮ್ಹಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 
ಉತ್ತರ ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗೋಡೌನ್ ನಲ್ಲಿ ಧಾರವಾಹಿ ಮತ್ತು ಸಿನಿಮಾ ಶೂಟಿಂಗ್ ಗೆ ಬಳಕೆಯಾಗುವ ವಸ್ತುಗಳ ಗೋಡೌನ್ ಇದೆ. ಇದರ ಪಕ್ಕದಲ್ಲೇ ಒಂದು ಪ್ಲಾಸ್ಟಿಕ್ ಗೋಡೌನ್ ಇದ್ದು, ಅದಕ್ಕೆ ತಗಲಿದ ಬೆಂಕಿ ಅರುಣ್ ಸಾಗರ್ ಅವರ ಶೂಟಿಂಗ್ ಗೋಡೌನ್ ಗೂ ತಗಲಿದೆ ಎನ್ನಲಾಗಿದೆ.

ಇದರಿಂದಾಗಿ ಒಂದು ಕೋಟಿ ರೂ. ಗೂ ಹೆಚ್ಚು ನಷ್ಟವಾಗಿದೆ. ಬಹುಶಃ ಪ್ಲಾಸ್ಟಿಕ್ ಗೋಡೌನ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರಿಂದಾಗಿ ಅರುಣ್ ಸಾಗರ್ ಅವರ ಬಹುತೇಕ ಕಲಾ ಕೃತಿಗಳು ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟರ ಬಗ್ಗೆ ಬೆಚ್ಚಿಬೀಳಿಸುವಂಥಾ ಹೇಳಿಕೆ ಕೊಟ್ಟ ಪಾಕ್ ನಟಿ