Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟರ ಬಗ್ಗೆ ಬೆಚ್ಚಿಬೀಳಿಸುವಂಥಾ ಹೇಳಿಕೆ ಕೊಟ್ಟ ಪಾಕ್ ನಟಿ

saba Qamarf
mumbai , ಶುಕ್ರವಾರ, 17 ಫೆಬ್ರವರಿ 2017 (08:55 IST)

ಪಾಕಿಸ್ತಾನಿ ನಟಿಯರಿಗೆ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಸರು ಮಾಡುವ ಹುಚ್ಚು ಅನ್ನಿಸುತ್ತೆ. ಈ ಹಿಂದೆ ವೀಣಾ ಮಲಿಕ್ ಇದಕ್ಕೆ ಫೇಮಸ್ ಆಗಿದ್ದರು. ಇದೀಗ, ಆ ಸಾಲಿಗೆ ಹೊಸ ಸೇರ್ಪಡೆ ಸಾಬಾ ಖಮಾರ್. ಬಾಲಿವುಡ್ ನಟರ ಬಗ್ಗೆ ಈಕೆ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಎಡೆಮಾಡಿದೆ.

 

ಹೃತಿಕ್ ರೋಶನ್, ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ, ರಿತೇಸ್ ದೇಶ್ ಮುಖ್ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಸಾಬಾ ಖಮಾರ್.

ಹೃತಿಕ್ ಜೊತೇ ಡೇಟಿಂಗ್ ಮಾಡ್ತೀರ ಎಂಬ ಪ್ರಶ್ನೆಗೆ ಮುಖವನ್ನ ತಿರುಗಿಸಿದ ಖಮಾರ್, 2 ಮಕ್ಕಳ ತಂದೆ ಜೊತೆ ಡೇಟಿಂಗ್ ಮಾಡಲ್ಲ, ಹೃತಿಕ್ ನನಗೆ ಕಪ್ ಆಫ್ ಟೀನೂ ಅಲ್ಲ ಎಂದಿದ್ದಾರೆ. ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಜೊತೆ ನಟಿಸಿ ಮೌತ್ ಕ್ಯಾನ್ಸರ್ ಬರಿದಿಕೊಳ್ಳುವ ಆಸೆ ಇಲ್ಲ, ರಿತೇಶ್ ದೇಶ್ ಮುಖ್`ಗೆ ನನ್ನಂತಾ ಏವನ್ ನಟಯರ ಜೊತೆ ನಟಿಸುವ ಅರ್ಹತೆ ಇಲ್ಲ ಎಂದಿದ್ದಾರೆ.   

ಹಿಂದಿ ಮೀಡಿಯಮ್ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿಗೆ ಕಾಯುತ್ತಿರುವ ಖಮಾರ್, ಈ ಕೀಳು ಹೇಳಿಕೆ ಮೂಲಕ ವಿವಾದವನ್ನ ಮೈಮೇಲಿ ಎಳೆದುಕೊಂಡಿದ್ದಾರೆ. ಇನ್ನೂ ಸಲ್ಮಾನ್ ಖಾನ್ ಏನ್ ಹೇಳಿದ್ದಾಳೆ ಗೊತ್ತಾ..? ವಿಡಿಯೋ ನೋಡಿ..


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧಾರ್ಥ ಪ್ರಪೋಸಲ್‌ಗೆ ಪ್ರಿಯಾಂಕಾ ಓಕೆ ಎಂದ ಕ್ಷಣ