Select Your Language

Notifications

webdunia
webdunia
webdunia
webdunia

ಕೊನೆಗೂ ವಿಷಾಧ ವ್ಯಕ್ತಪಡಿಸಿದ ತಮಿಳು ನಟ ಸತ್ಯರಾಜ್

ಕೊನೆಗೂ ವಿಷಾಧ ವ್ಯಕ್ತಪಡಿಸಿದ ತಮಿಳು ನಟ ಸತ್ಯರಾಜ್
ಚೆನ್ನೈ , ಶುಕ್ರವಾರ, 21 ಏಪ್ರಿಲ್ 2017 (19:46 IST)
ಕಾವೇರಿ ಹೋರಾಟದ ವೇಳೆ ಅವಹೇಳನಕಾರಿ ಹೇಳಿಕೆ ಕುರಿತಂತೆ ತಮಿಳು ನಟ ಸತ್ಯರಾಜ್ ವಿಷಾಧ ವ್ಯಕ್ತಪಡಿಸಿದ್ದಾರೆ. 9 ವರ್ಷಗಳ ಹಿಂದೆ ಪ್ರತಿಭಟನೆ ವೇಳೆ ಆವೇಶದಿಂದ ಆಡಿದ ಮಾತನ್ನ ದೊಡ್ಡದು ಮಾಡಬೇಡಿ. ನಾನು ಕನ್ನಡ ವಿರೋಧಿಯಲ್ಲ  ಬಾಹುಬಲಿ-2 ಚಿತ್ರದ ಬಿಡುಗಡೆಗೆ ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಸತ್ಯರಾಜ್ ಮನವಿ ಮಾಡಿದ್ದಾರೆ.

ಯಾರೋ ಬರೆದುಕೊಟ್ಟ ಬರಹವನ್ನ ಪೇಪರ್ ಹಿಡಿದು ಸತ್ಯರಾಜ್ ಓದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾವೇರಿ ಹೋರಾಟದಲ್ಲಿ ನಾನು ಯಾವಾಗಲೂ ತಮಿಳುನಾಡು ರೈತರ ಪರವಾಗಿಯೇ ಇರುತ್ತೇನೆ. ಒಬ್ಬ ತಮಿಳನಾಗಿ ಸಾಯಲು ಇಷ್ಟಪಡುತ್ತೇನೆ ಎಂದು ಸತ್ಯರಾಜ್ ಹೇಳಿದ್ದಾರೆ. ಇದೇ
ವೇಳೆ, ನಿಮಗೆ ನಷ್ಟವಾಗುತ್ತೆ ಎನ್ನುವುದಾದರೆ ನನಗೆ ನಿಮಗೆ ಅವಕಾಶ ಕೊಡಬೇಡಿ ಎಂದು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಸತ್ಯರಾಜ್ ತಿಳಿಸಿದ್ದಾರೆ.

ಸತ್ಯರಾಜ್ ವಿಡಿಯೋ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಸತ್ಯರಾಜ್ ವಿಡಿಯೋ ಹೇಳಿಕೆ ಕುರಿತು ಪರಿಶೀಲನೆ ನಡೆಸಿ ಬಾಹುಬಲಿ ಚಿತ್ರ ಬಿಡುಗಡೆ ಬಗ್ಗೆ ನಾಳೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹಣಕ್ಕಾಗಿ ಬಾಹುಬಲಿ ವಿರೋಧಿಸುತ್ತಿದ್ದೀರಿ: ಫೇಸ್ಬುಕ್`ನಲ್ಲಿ ವಾಟಾಳ್, ಸಾ.ರಾ. ಗೋವಿಂದು ವಿರುದ್ಧ ಪ್ರಶಾಂತ್ ಸಂಬರ್ಗಿ ಆರೋಪ