ಚಿಯಾನ್ ವಿಕ್ರಮ್ ಜೊತೆ ರಿಷಬ್ ಶೆಟ್ಟಿ: ಫೈನಲೀ ಕನಸು ನನಸಾಯ್ತು

Krishnaveni K
ಬುಧವಾರ, 7 ಆಗಸ್ಟ್ 2024 (13:01 IST)
Photo Credit: Instagram
ಬೆಂಗಳೂರು: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮಿಳಿನ ಸ್ಟಾರ್ ನಟ ವಿಕ್ರಮ್ ಜೊತೆಗಿರುವ ಫೋಟೋ ಹಂಚಿಕೊಂಡಿದ್ದು ಕೊನೆಗೂ ನನ್ನ ಕನಸು ನನಸಾಯಿತು ಎಂದು ಬರೆದುಕೊಂಡಿದ್ದಾರೆ.

ಸದ್ಯಕ್ಕೆ ಕಾಂತಾರ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರುವ ರಿಷಬ್ ಶೆಟ್ಟಿ ಇದೀಗ ತಮಿಳು ನಟ ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾಗಿದ್ದಾರೆ. ಯಾವ ಕಾರಣಕ್ಕೆ ಭೇಟಿಯಾಗಿದ್ದು ಎಂಬುದನ್ನು ಶೆಟ್ಟರು ಬಿಟ್ಟುಕೊಟ್ಟಿಲ್ಲ. ಆದರೆ ವಿಕ್ರಮ್ ಬಗ್ಗೆ ತಮ್ಮ ಅಭಿಮಾನವನ್ನು ಅಕ್ಷರ ರೂಪದಲ್ಲಿ ಪ್ರಕಟಿಸಿದ್ದಾರೆ.

‘ನಾನೊಬ್ಬ ನಟನಾಗಬೇಕು ಎಂಬ ಪ್ರಯಾಣದಲ್ಲಿ ನನಗೆ ಸ್ಪೂರ್ತಿಯಾದವರಲ್ಲಿ ಚಿಯಾನ್ ವಿಕ್ರಮ್ ಅವರೂ ಒಬ್ಬರು. 24 ವರ್ಷಗಳ ನಂತರ ನನ್ನ ಮೆಚ್ಚಿನ ಹೀರೋನನ್ನು ಭೇಟಿಯಾದೆ, ಈಗ ನಾನು ಜಗತ್ತಿನ ಅತ್ಯಂತ ಅದೃಷ್ಟಶಾಲಿ ಎನಿಸುತ್ತಿದೆ. ನನ್ನಂತಹವರಿಗೆ ಸ್ಪೂರ್ತಿಯಾಗಿದ್ದಕ್ಕೆ ಧನ್ಯವಾದಗಳು ಸರ್ ಮತ್ತು ನಿಮ್ಮ ಮುಂದಿನ ತಂಗಳಾನ್ ಸಿನಿಮಾಗೆ ಆಲ್ ದಿ ಬೆಸ್ಟ್’ ಎಂದು ರಿಷಬ್ ಬರೆದುಕೊಂಡಿದ್ದಾರೆ.

ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು ನಿಮ್ಮಿಬ್ಬರನ್ನೂ ಒಟ್ಟಿಗೇ ತೆರೆ ಮೇಲೆ ನೋಡಬೇಕು ಎಂಬುದು ನಮ್ಮ ಆಸೆ. ಕಾಂತಾರ ಸಿನಿಮಾದಲ್ಲೇ ಯಾಕೆ ನೀವಿಬ್ಬರೂ ಒಟ್ಟಿಗೆ ನಟಿಸಬಾರದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾಳೆ ದರ್ಶನ್ ವಿಜಯಲಕ್ಷ್ಮಿ 23ನೇ ವಿವಾಹ ವಾರ್ಷಿಕೋತ್ಸವ, ಪತ್ನಿ ಮಗನೊಂದಿಗೆ ಸಮಯ ಕಳೆಯಲು ವಿಶೇಷ ಮನವಿ

ಕ್ರಿಕೆಟಿಗ ತಿಲಕ್ ವರ್ಮಾ ಜತೆ ನಟಿ ಶ್ರೀಲೀಲಾ ಡೇಟಿಂಗ್ ವದಂತಿ: ಮೌನ ಮುರಿದ ನಟಿ ತಾಯಿ ಸ್ವರ್ಣಲತಾ

ಯಾವುದೇ ಜೀವನಾಂಶವಿಲ್ಲ, ಮೂರನೇ ವ್ಯಕ್ತಿಯ ಪಾತ್ರವಿಲ್ಲ: ಮೌನಿ ರಾಯ್ ಜತೆಗಿನ ವಿಚ್ಚೇಧನಕ್ಕೆ ಕೊನೆಗೂ ಮೌನ ಮುರಿದ ಸೂರಜ್ ನಂಬಿಯಾರ್‌

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆದಿ ಪಿನಿಸೆಟ್ಟಿ, ನಿಕ್ಕಿ ಗಲ್ರಾನಿ ದಂಪತಿ

ದರ್ಶನ್ ಗೆ ಇನ್ನೊಂದು ವರ್ಷದ ಜೈಲೇ ಗತಿ: ವಿಜಯಲಕ್ಷ್ಮಿ ಇಂಟ್ರೆಸ್ಟಿಂಗ್ ಪೋಸ್ಟ್

ಮುಂದಿನ ಸುದ್ದಿ
Show comments