ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಅವತಾರ ನೋಡಲು ಕಾಯ್ತಿದ್ದಾರೆ ಫ್ಯಾನ್ಸ್

Krishnaveni K
ಗುರುವಾರ, 23 ಮೇ 2024 (10:43 IST)
Photo Courtesy: Twitter
ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಶ್ರೀವಲ್ಲಿ ಹಾಡು ಇಂದು ಬಿಡುಗಡೆಯಾಗುತ್ತಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ಹೇಗೆ ಕಾಣಿಸಬಹುದು ಎಂದು ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

ಪುಷ್ಪ ಭಾಗ 1 ರಲ್ಲಿ ಶ್ರೀವಲ್ಲಿ ಹಾಡು ಭಾರೀ ಜನಪ್ರಿಯವಾಗಿತ್ತು. ಇದರ ಸ್ಟೆಪ್ಸ್ ಕೂಡಾ ವೈರಲ್ ಆಗಿತ್ತು. ರಶ್ಮಿಕಾರನ್ನು ಜನ ಶ್ರೀವಲ್ಲಿ ಎಂದೇ ಕರೆಯಲಾರಂಭಿಸಿದ್ದರು. ಅಷ್ಟರ ಮಟ್ಟಿಗೆ ಆ ಪಾತ್ರ, ಹಾಡು ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಇದೀಗ ಮತ್ತೊಮ್ಮೆ ಪುಷ್ಪ 2 ಸಿನಿಮಾದಲ್ಲೂ ಶ್ರೀವಲ್ಲಿ ಹಾಡಿನೊಂದಿಗೆ ಬರಲಿದ್ದಾರೆ.

ಈ ಹಾಡಿನ ಶೂಟಿಂಗ್ ಮಾಡುವಾಗ ತುಂಬಾ ಎಂಜಾಯ್ ಮಾಡಿದ್ದೆ. ಹಾಡನ್ನೂ ನೀವು ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ಅಂದುಕೊಂಡಿದ್ದೇನೆ ಎಂದಿದ್ದಾರೆ ರಶ್ಮಿಕಾ. ಈ ಹಾಡಿನಲ್ಲಿ ರಶ್ಮಿಕಾ ಮಾತ್ರ ಇರುತ್ತಾರೆಯೇ ಅಥವಾ ನಾಯಕ ಅಲ್ಲು ಅರ್ಜುನ್ ಕೂಡಾ ಕಾಣಿಸಿಕೊಳ್ಳಲಿದ್ದಾರಾ ನೋಡಬೇಕಿದೆ.

ಶ್ರೀವಲ್ಲಿ ಹಾಡು ಇಂದು ಬೆಳಿಗ್ಗೆ 11.07 ಗಂಟೆಗೆ ಬಿಡುಗಡೆಯಾಗಲಿದೆ. ಪುಷ್ಪ ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಡಿಎಸ್ ಪಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಟೈಟಲ್ ಹಾಡು ಬಿಡುಗಡೆಯಾಗಿದೆ. ಇದೀಗ ಎರಡನೇ ಹಾಡು ಇಂದು ಲೋಕಾರ್ಪಣೆಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಜಿಯೋ ಹಾಟ್‌ಸ್ಟಾರ್ ಸರ್ವರ್‌ ದಿಢೀರ್‌ ಡೌನ್‌: ಸರ್ಚ್‌ ಬಟನ್‌ ನಾಪತ್ತೆ, ಚಂದಾದಾರರ ಪರದಾಟ

ಎರಡನೇ ಮದುವೆಗೆ ಸಜ್ಜಾದ ರಘು ದೀಕ್ಷಿತ್: ಹುಡುಗಿ ಕೂಡಾ ಫೇಮಸ್, ವಯಸ್ಸಿನ ಅಂತರ ಎಷ್ಟು ಗೊತ್ತಾ

ಜೈಲಲ್ಲಿ ಬಹಳ ಹಿಂಸೆಯಾಗ್ತಿದೆ, ಇಲ್ಲಿರಲು ಆಗ್ತಿಲ್ಲ: ಅಧಿಕಾರಿಗಳ ಮುಂದೆ ಗೋಗೆರೆದ ದರ್ಶನ್

ಮುಂದಿನ ಸುದ್ದಿ
Show comments