Webdunia - Bharat's app for daily news and videos

Install App

ನಟ ದರ್ಶನ್ ರನ್ನು ಅನ್ ಫಾಲೋ ಮಾಡಿದ್ರಾ ಪವಿತ್ರಾ ಗೌಡ

Krishnaveni K
ಗುರುವಾರ, 23 ಮೇ 2024 (08:50 IST)
Photo Courtesy: Instagram
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ದುಬೈನಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಇತ್ತ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಕರ್ಮ ಎಂದು ಬರೆದುಕೊಂಡು ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.

ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸ್ನೇಹ ಎಲ್ಲರಿಗೂ ಗೊತ್ತೇ ಇದೆ. ದರ್ಶನ್ ಪತ್ನಿ ಜೊತೆ ವಿದೇಶಕ್ಕೆ ಹಾರಿದ ಬೆನ್ನಲ್ಲೇ ಪವಿತ್ರಾ ಇಂತಹದ್ದೊಂದು ಪೋಸ್ಟ್ ಹಾಕಿದ್ದು ಯಾಕೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಇದರ ನಡುವೆ ಈಗ ಪವಿತ್ರಾ ಇನ್ ಸ್ಟಾಗ್ರಾಂನಲ್ಲಿ ದರ್ಶನ್ ರನ್ನು ಅನ್ ಫಾಲೋ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಅಭಿಮಾನಿಗಳು ಪವಿತ್ರಾ ಗೌಡರನ್ನು ಪ್ರಶ್ನಿಸಿದ್ದಾರೆ. ನಿಮ್ಮ ನಡುವೆ ಏನಾಗಿದೆ. ಯಾಕೆ ನಮ್ಮ ಬಾಸ್ ನ ಅನ್ ಫಾಲೋ ಮಾಡಿದ್ದೀರಿ ಎಂದು ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡಗೆ ಪ್ರಶ್ನೆ ಮಾಡಿದ್ದಾರೆ. ಮಗಳ ಜೊತೆಗಿನ ಫೋಟೋ ಹಂಚಿಕೊಂಡ ಪವಿತ್ರಾ ನಮ್ಮೊಳಗಿನ ಸೌಂದರ್ಯ ಯಾವತ್ತೂ ಶಾಶ್ವತವಾಗಿರುತ್ತದೆ ಎಂದು ಬರೆದುಕೊಂಡಿದ್ದರು.

ಈ ಫೋಟೋಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ದರ್ಶನ್ ರನ್ನು ಅನ್ ಫಾಲೋ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಪತ್ನಿ ಜೊತೆ ವಿದೇಶದಲ್ಲಿ ದರ್ಶನ್ ತೆರಳಿರುವ ಬೆನ್ನಲ್ಲೇ ಪವಿತ್ರಾ ಮುನಿಸಿಕೊಂಡು ಈ ರೀತಿ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆದರೆ ತಮ್ಮನ್ನು ಪ್ರಶ್ನಿಸಿದವರಿಗೆ ಯಾರಿಗೂ ಪವಿತ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಬಳಿಕ ಮತ್ತೊಂದು ಬಿಗ್ ಸ್ಟಾರ್ ಸಿನಿಮಾಗೆ ನಾಯಕಿಯಾದ ರುಕ್ಮಿಣಿ ವಸಂತ್

ದಿಡೀರ್ ಆಗಿ ಅಭಿಮಾನಿಗಳಿಗೆ ಒಂದು ಮೆಸೇಜ್ ಕೊಟ್ಟ ರಾಜ್ ಬಿ ಶೆಟ್ಟಿ

ವಿಷ್ಣುವರ್ಧನ್ ಇರುವ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು: ವಿವಾದಕ್ಕೆ ಟ್ವಿಸ್ಟ್

ಜೈಲು ಪಾಲಾದ ದರ್ಶನ್ ಪತ್ನಿಗೆ ಅಶ್ಲೀಲ ಕಮೆಂಟ್ಸ್‌: ವಿಜಯಲಕ್ಷ್ಮಿಗೆ ಮಹಿಳಾ ಆಯೋಗ ಅಭಯ

26 ವರ್ಷಗಳ ಬಳಿಕ ಮನೆಗೆ ಮಗ ಬಂದ: ಮಗನ ಆಗಮಕ್ಕೆ ಖುಷಿಯಾದ ನಟಿ ನವ್ಯಾ ನಾರಾಯಣ್‌

ಮುಂದಿನ ಸುದ್ದಿ
Show comments