Select Your Language

Notifications

webdunia
webdunia
webdunia
webdunia

ಯಶ್ 19 ಕ್ಕೆ ಕಾದು ಕಾದು ಸುಸ್ತಾದ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಸಿನಿಮಾ ಬಳಿಕ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಬಹುದು ಎಂದು ಅಭಿಮಾನಿಗಳು ಒಂದು  ವರ್ಷದಿಂದ ಕಾಯುತ್ತಲೇ ಇದ್ದಾರೆ. ಆದರೆ ಇದುವರೆಗೆ ಅದು ನನಸಾಗಿಲ್ಲ.

ಯಶ್ ದಸರಾ ವೇಳೆ ಹೊಸ ಸಿನಿಮಾ ಘೋಷಣೆ ಮಾಡಬಹುದು ಎಂದು ಸುದ್ದಿಯಾಗಿತ್ತು. ಅದು ಸುಳ್ಳಾಯಿತು. ಬಳಿಕ ಕೆಜಿಎಫ್ 2 ನೂರು ದಿನ ಆಚರಿಸಿದ ಬಳಿಕ ಘೋಷಣೆ ಮಾಡಬಹುದು ಎಂದು ಸುದ್ದಿಯಾಗಿತ್ತು. ಅದೂ ಸುಳ್ಳಾಯಿತು. ಯಶ್ ಲಕ್ಕಿ ತಿಂಗಳು ಡಿಸೆಂಬರ್ ನಲ್ಲೂ ಯಾವುದೇ ಘೋಷಣೆ ಹೊರಬರುವ ಸೂಚನೆ ಕಾಣುತ್ತಿಲ್ಲ.

ಇದರಿಂದ ಯಶ್ ಅಭಿಮಾನಿಗಳು ಹತಾಶೆಗೊಳಗಾಗಿದ್ದಾರೆ. ಈ ನಡುವೆ ಅವರು ತಮ್ಮದೇ ಪ್ರೊಡಕ್ಷನ್ ಹೌಸ್ ಹುಟ್ಟುಹಾಕಿ ಅದರ ಮೂಲಕವೇ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದುವರೆಗೆ ಆ ಬಗ್ಗೆಯೂ ಯಶ್ ಕಡೆಯಿಂದ ಯಾವುದೇ ಮಾಹಿತಿ ಇಲ್ಲ. ಯಶ್ 19 ನೇ ಸಿನಿಮಾ ಬಗ್ಗೆ ಕೇಳಿದಾಗಲೆಲ್ಲಾ ಕಾದು ನೋಡಿ ಎಂದಷ್ಟೇ ಉತ್ತರ ಬರುತ್ತಿದೆ. ಮುಂದಿನ ತಿಂಗಳು ಯಶ್ ಹುಟ್ಟುಹಬ್ಬವಿದ್ದು ಆಗಲಾದರೂ ಹೊಸ ಸಿನಿಮಾ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಮನ್ ದೀಪ್ ರಾಯ್ ಗೆ ತೀವ್ರ ಹೃದಯಾಘಾತ