ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ಕಾನೂನು ಸಂಘರ್ಷದಲ್ಲಿ ಗೆಲುವು ಸಾಧಿಸಿ ಇದೀಗ ಮತ್ತೆ ಯಥಾ ಸ್ಥಿತಿಗೆ ಮರಳಿದೆ.
ಕೇರಳ ಕೋರ್ಟ್ ತಡೆಯಾಜ್ಞೆ ಹಿನ್ನಲೆಯಲ್ಲಿ ವರಾಹ ರೂಪಂನ ಮೂಲ ಹಾಡಿನ ಬದಲಾಗಿ ಮತ್ತೊಂದು ಹಾಡನ್ನು ಥಿಯೇಟರ್ ಮತ್ತು ಒಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು.
ಆದರೆ ಈಗ ಕೋರ್ಟ್ ನಲ್ಲಿ ಕಾಂತಾರ ತಂಡಕ್ಕೆ ಗೆಲುವು ಸಿಕ್ಕಿದ್ದು, ನಿನ್ನೆಯಿಂದ ಥಿಯೇಟರ್ ಮತ್ತು ಒಟಿಟಿಯಲ್ಲಿ ಮರಳಿ ಮೂಲ ಹಾಡಿನ ಬಳಕೆ ಮಾಡಲಾಗುತ್ತಿದೆ. ಈ ಹಾಡು ಚಿತ್ರಕ್ಕೆ ಕಳಶ ಪ್ರಾಯದಂತಿತ್ತು. ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಬೇರೊಂದು ಹಾಡು ಬಳಸಿದ್ದಕ್ಕೆ ವೀಕ್ಷಕರಿಗೆ ತೀವ್ರ ನಿರಾಸೆಯಾಗಿತ್ತು. ಆದರೆ ಈಗ ಮರಳಿ ಮೂಲ ಹಾಡು ಬಳಕೆ ಮಾಡಲಾಗುತ್ತಿರುವುದು ಪ್ರೇಕ್ಷಕರಿಗೆ ಖುಷಿ ತಂದಿದೆ.