Publish Date: Fri, 11 Sep 2020 (10:16 IST)
Updated Date: Fri, 11 Sep 2020 (10:17 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿಯವರ ಹೊಸ ಸಿನಿಮಾದ ಲುಕ್ ರಿವೀಲ್ ಆಗಿದ್ದು, ಅದನ್ನು ಕಂಡು ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಚಿರಂಜೀವಿಯವರು ತಮ್ಮ ಹೊಸ ಲುಕ್ ಫೋಟೊವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಚಿರಂಜೀವಿಯವರು ತಲೆ ಬೋಳಿಸಿಕೊಂಡು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಇದು ಈಗ ವೈರಲ್ ಆಗಿದೆ.
ಚಿರಂಜೀವಿಯವರು ಹೀಗೆ ಮಾಡಿಕೊಂಡಿದ್ದು ಅವರ ಮುಂದಿನ ಸಿನಿಮಾಕ್ಕಾಗಿ. ತಮಿಳಿನಲ್ಲಿ ಅಜಯ್ ನಟಿಸಿರುವ ವೇದಾಲಂ ಸಿನಿಮಾ ತೆಲುಗಿಗೆ ರಿಮೇಕ್ ಆಗಲಿದ್ದು, ಅದರಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಅದಕ್ಕಾಗಿ ಈ ಅವತಾರ ತಾಳಿದ್ದಾರೆ ಎನ್ನಲಾಗಿದೆ.