Publish Date: Mon, 02 Dec 2019 (16:17 IST)
Updated Date: Mon, 02 Dec 2019 (16:23 IST)
ಬೆಂಗಳೂರು: ಇನ್ನೂ ಅಂಬೆಗಾಲಿಡುತ್ತಿರುವ ಮಗು ಆದರೂ ಸ್ಟಾರ್ ದಂಪತಿ ಮಗು ಎನ್ನುವ ಕಾರಣಕ್ಕೆ ಐರಾ ಯಶ್ ಎಲ್ಲರ ಅಚ್ಚುಮೆಚ್ಚಾಗಿದ್ದಾಳೆ. ರಾಕಿಂಗ್ ದಂಪತಿಯ ಮೊದಲ ಮಗಳು ಐರಾಗೆ ಇಂದು ಜನ್ಮದಿನದ ಸಂಭ್ರಮ.
ಹೀಗಾಗಿ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪುಟಾಣಿ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದಾರೆ.
ಅದರಲ್ಲೂ ದಾವಣಗೆರೆಯ ಅಭಿಮಾನಿಗಳು ಪುಣ್ಯಾಶ್ರಮದಲ್ಲಿ ಅನ್ನದಾನ ಮಾಡುವ ಮೂಲಕ ಐರಾ ಬರ್ತ್ ಡೇಯನ್ನು ಸ್ಮರಣೀಯಗೊಳಿಸಿದ್ದಾರೆ.