ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್ ಸಿನಿಮಾದ ಟೀಸರ್ ಬಂದು ಎಷ್ಟೋ ತಿಂಗಳೇ ಆಗಿದೆ. ಆದರೆ ಇದಾದ ಬಳಿಕ ಸಿನಿಮಾ ಬಗ್ಗೆ ಯಾವುದೇ ಅಪ್ ಡೇಟ್ ಬಂದಿಲ್ಲ. ಇದು ಅಭಿಮಾನಿಗಳಿಗೆ ನಿರಾಸೆ ತಂದಿದೆ.
ಮಾರ್ಟಿನ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಡುವಂತೆ ಫ್ಯಾನ್ಸ್ ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್ ಗೆ ಸೋಷಿಯಲ್ ಮೀಡಿಯಾ ಮೂಲಕ ಬೇಡಿಕೆಯಿಟ್ಟಿದ್ದಾರೆ.
ಮಾರ್ಟಿನ್ ಅಪ್ ಡೇಟ್ ಸಿಗದೇ ನಿರಾಸೆಯಾಗಿದೆ. ಅಣ್ಣನಿಗೆ ಅಪ್ ಡೇಟ್ ಕೊಡಕ್ಕೆ ಹೇಳಿ ಅತ್ತಿಗೆ ಎಂದು ಬೇಡಿಕೆಯಿಟ್ಟಿದ್ದಾರೆ. ಅಕ್ಟೋಬರ್ ನಲ್ಲಿ ಧ್ರುವ ಸರ್ಜಾ ಹುಟ್ಟುಹಬ್ಬವಿದ್ದು, ಆ ಸಂದರ್ಭದಲ್ಲಿ ಮಾರ್ಟಿನ್ ಬಗ್ಗೆ ಅಪ್ ಡೇಟ್ ಸಿಗುವ ನಿರೀಕ್ಷೆಯಿದೆ.