Publish Date: Wed, 25 Aug 2021 (09:10 IST)
Updated Date: Wed, 25 Aug 2021 (09:16 IST)
ಚೆನ್ನೈ: ಬಹುಭಾಷಾ ನಟಿ ಖುಷ್ಬೂ ಎಂದರೆ ಈಗಲೂ ಆರಾಧಿಸುವ ಎಷ್ಟೋ ಅಭಿಮಾನಿಗಳಿದ್ದಾರೆ. ವಯಸ್ಸಾದರೂ ಅವರ ಚಾರ್ಮ್ ಮಾತ್ರ ಕಡಿಮೆಯಾಗಿಲ್ಲ.
ಖುಷ್ಬೂ ತಮ್ಮ ಗ್ಲಾಮರಸ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ ಅಭಿಮಾನಿಯೊಬ್ಬ ಖುಷ್ಬೂಗೆ ನಿಮ್ಮನ್ನು ಮದುವೆಯಾಗಬೇಕು ಎಂದು ಬೇಡಿಕೆಯಿಟ್ಟಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿರುವ ಖುಷ್ಬೂ ಓ ಕ್ಷಮಿಸಿ. ನೀವು ತುಂಬಾ ತಡ ಮಾಡಿದಿರಿ. ಹಾಗಿದ್ದರೂ ನನ್ನ ಗಂಡನನ್ನೊಮ್ಮೆ ಕೇಳಿ ನೋಡ್ತೀನಿ ಎಂದು ತಮಾಷೆಯಾಗಿ ಹೇಳಿದ್ದಾರೆ. ಖುಷ್ಬೂ ಈ ಕಾಮೆಂಟ್ ಹಲವರನ್ನು ನಗೆಗಡಲಲ್ಲಿ ತೇಲಿಸಿದೆ.