Select Your Language

Notifications

webdunia
webdunia
webdunia
webdunia

ಖ್ಯಾತ ನಟ ಫಹಾದ್ ಕೈಯಲ್ಲಿ ಕೀಪ್ಯಾಡ್ ಮೊಬೈಲ್, ಬೆಲೆ ಕೇಳಿದ್ರೆ ಅಚ್ಚರಿ ಆಗುವುದು ಗ್ಯಾರಂಟಿ

ಫಹಾದ್ ಫಾಸಿಲ್ ಕೀಪ್ಯಾಡ್ ಮೊಬೈಲ್

Sampriya

ಕೇರಳ , ಬುಧವಾರ, 16 ಜುಲೈ 2025 (15:32 IST)
Photo Credit X
ಬಹುಭಾಷಾ ನಟ ಫಹಾದ್ ಫಾಸಿಲ್ ಅವರು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಬಳಸಿದ ತಮ್ಮ ಪೋನ್ ಸಲುವಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಖ್ಯಾತ ನಟನೊಬ್ಬ ಬಳಸುತ್ತಿರುವ ಪೋನ್‌ ಅವರ ಅಭಿಮಾನಿಗಳಿಗೆ ದಿಗ್ಭ್ರಮೆಗೊಳಿಸಿದೆ.

ಅಭಿನವ್ ಸುಂದರ್ ನಾಯಕ್ ಅವರ ನಾಸ್ಲೆನ್ ಅಭಿನಯದ ಮಾಲಿವುಡ್ ಟೈಮ್ಸ್ ನ ಪೂಜಾ ಸಮಾರಂಭದಲ್ಲಿ ನಟ ಫಹಾದ್ ಫಾಸಿಲ್ ಅವರು ಭಾಗವಹಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 

ಈಚೆಗೆ ಟಾಪ್ ಟ್ರೆಂಡಿಂಗ್‌ನಲ್ಲಿರುವ ಮೊಬೈಲ್ ಫೋನ್ ಆಯ್ಕೆ ಮಾಡುವ ಸೆಲೆಬ್ರಿಟಿಗಳಿಗಿಂತ ಫಹಾದ್ ಅವರು ಕೀಪ್ಯಾಡ್ ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಯಿತು. 

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡುವ ಹೆಚ್ಚಿನ ಸೆಲೆಬ್ರಿಟಿಗಳಿಗಿಂತ ಭಿನ್ನವಾಗಿ, ಫಹಾದ್ ಕೀಪ್ಯಾಡ್‌ನೊಂದಿಗೆ ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದು ಅಚ್ಚರಿಗೊಳಿಸಿತು. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 

ದಕ್ಷಿಣ ಭಾರತದ ಖ್ಯಾತ ನಟನೊಬ್ಬ ಕೀಪ್ಯಾಡ್ ಮೊಬೈಲ್ ಬಳಕೆ ಮಾಡುತ್ತಿರುವ ವಿಚಾರ ದೊಡ್ಡ ಅಚ್ಚರಿ ಹಾಗೂ ಫಹಾದ್ ಸರಳತೆ ಬಗ್ಗೆ ಮಾತನಾಡುವಂತೆ ಮಾಡಿತು. 

ಆದರೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಫಹಾದ್ ಬಳಕೆ ಮಾಡುತ್ತಿರುವ ಕೀಪ್ಯಾಡ್ ಮೊಬೈಲ್‌ ಲಕ್ಷಾಂತರ ರೂಪಾಯಿದ್ದು ಎಂದು ತಿಳಿದುಬಂದಿದೆ. 

ಫಹಾದ್ ಬಳಸುತ್ತಿರುವ ಫೋನ್ ಐಷಾರಾಮಿ ಮೊಬೈಲ್ ಫೋನ್ ಕಂಪನಿ ವರ್ಟು ತಯಾರಿಸಿದೆ. ವೆಬ್‌ಸೈಟ್ ಪ್ರಕಾರ, ವೆರ್ಟು ಅಸೆಂಟ್ ರೆಟ್ರೋ ಕ್ಲಾಸಿಕ್ ಕೀಪ್ಯಾಡ್ ಫೋನ್, ವೀಡಿಯೊದಲ್ಲಿ ಮಾಡೆಲ್ ಫಹಾದ್ ಹೊತ್ತೊಯ್ಯುತ್ತಿರುವಂತೆ ತೋರುತ್ತಿದೆ, ಇದರ ಬೆಲೆ $11,920 (₹10,22,461). ವೆಬ್‌ಸೈಟ್ ಫೋನನ್ನು ಔಟ್ ಆಫ್ ಸ್ಟಾಕ್ ಎಂದು ಪಟ್ಟಿ ಮಾಡಿದೆ, ಆದ್ದರಿಂದ ಫಹಾದ್ ಸ್ವಲ್ಪ ಸಮಯದ ಹಿಂದೆ ಅದನ್ನು ಖರೀದಿಸಿರುವ ಸಾಧ್ಯತೆಯಿದೆ. ವರ್ಟು ಫೋನ್‌ಗಳ ಬೆಲೆಗಳು $500,000 (₹4,29,08,250) ವರೆಗೆ ಏರುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಿಗೆ ಜನ್ಮನೀಡಿದ ಕಿಯಾರಾ ಅಡ್ವಾಣಿ: ಬಾಲಿವುಡ್‌ನ ಸ್ಟಾರ್‌ ಜೋಡಿ ಮನೆಯಲ್ಲಿ ಸಂಭ್ರಮ