Webdunia - Bharat's app for daily news and videos

Install App

ಏಕ್ ಲಡಕಿ ಕೋ ದೇಖಾ ತೊ ಐಸಾ ಲಗಾ' ಚಿತ್ರದ ಮೊದಲ ಸ್ಟಿಲ್ ಹಂಚಿಕೊಂಡ ಜೂಹಿ ಚಾವ್ಲಾ..

ನಾಗಶ್ರೀ ಭಟ್
ಶುಕ್ರವಾರ, 16 ಫೆಬ್ರವರಿ 2018 (17:58 IST)
ಅನಿಲ್ ಕಪೂರ್, ಜೂಹಿ ಚಾವ್ಲಾ, ಸೋನಮ್ ಕಪೂರ್ ಮತ್ತು ರಾಜ್‌ಕುಮಾರ್ ರಾವ್ 'ಏಕ್ ಲಡ್ಕಿ ಕೋ ದೇಖಾ ತೊ ಐಸಾ ಲಗಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಜೂಹಿ ಚಾವ್ಲಾ ಇವರೊಂದಿಗಿರುವ ಚಿತ್ರವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
"ಹೀಗೆ ಮುಂದುವರಿಯೋಣ... #EkLadkiKoDekhaTohAisaLaga ಕುಟುಂಬದೊಂದಿಗೆ ಮೊದಲ ಫೋಟೋ @anilskapoor , @rajkummar_rao , @sonamkapoor & #ShellyChopraDhar! #VidhuVinodChopra #RajKumarHiraniFilms @foxstarhindi.” ಎಂದು ಬರೆದು ಫೋಟೋವೊಂದನ್ನು ಜೂಹಿ ಚಾವ್ಲಾ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
 
ಈ ಚಿತ್ರವು ಬರೋಬ್ಬರಿ 11 ವರ್ಷಗಳ ನಂತರ ಅನಿಲ್ ಕಪೂರ್ ಮತ್ತು ಜೂಹಿ ಚಾವ್ಲಾ ಅವರನ್ನು ಒಟ್ಟಿಗೆ ತೆರೆಯಮೇಲೆ ತರಲಿದೆ. ಇವರಿಬ್ಬರೂ ಕೊನೆಯ ಬಾರಿ 'ಸಲಾಮ್-ಏ-ಇಷ್ಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 1994 ರಲ್ಲಿ ಅನಿಲ್ ಕಪೂರ್ ಮತ್ತು ಮನಿಶಾ ಕೊರಾಯಿಲಾ ಅಭಿನಯಿಸಿದ ಚಿತ್ರ '1942: ಎ ಲವ್ ಸ್ಟೋರಿ' ಚಿತ್ರದ ಪುನರ್ ನಿರ್ಮಾಣದ ಆವೃತ್ತಿ ಇದಾಗಿರಲಿದೆ. ಈ ಚಿತ್ರದಲ್ಲಿನ ಏಕ್ ಲಡಕಿ ಕೋ ದೇಖಾ ತೊ ಐಸಾ ಲಗಾ ಹಾಡು ಬಹಳ ಜನಪ್ರಿಯತೆಯನ್ನು ಪಡೆದಿತ್ತು. ಹಾಗಾಗಿ ಅದರಿಂದ ಪ್ರೇರಿತವಾಗಿ ಈಗ ಚಿತ್ರದ ಹೆಸರನ್ನೇ 'ಏಕ್ ಲಡಕಿ ಕೋ ದೇಖಾ ತೊ' ಐಸಾ ಲಗಾ ಎನ್ನುವ ಹೆಸರನ್ನಿಟ್ಟಿದ್ದಾರೆ ಎನ್ನಲಾಗುತ್ತಿದೆ.
 
"ನಾವು ಮೂಲ ಚಿತ್ರವನ್ನು ಮರುಸೃಷ್ಟಿಸುತ್ತಿದ್ದೇವೆ ಮತ್ತು ನಾವು ಅದನ್ನು ನಕಲಿಸಲು ಬಯಸುತ್ತೇವೆ. ಮೂಲ ಚಿತ್ರವನ್ನು ಸೋಲಿಸುವುದು ಕಷ್ಟವಾಗಿರುವುದರಿಂದ ನಾವು ಅದಕ್ಕೆ ಸಮಾನವಾದರೂ ಅದೇ ನಮಗೆ ಸಂತೋಷ. ಅದೇನೇ ಇದ್ದರೂ, ಈ ಚಿತ್ರದಲ್ಲಿ ಹಾಡಿನ ಹೊಸ ಆವೃತ್ತಿಯನ್ನು ಯಾರು ಹಾಡುತ್ತಾರೆ ಮತ್ತು ಚಿತ್ರದಲ್ಲಿ ಯಾರಿಗೆ ಹಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ" ಎಂದು ಚಿತ್ರದ ನಿರ್ದೇಶಕ ಶೆಲ್ಲಿ ಚೋಪ್ರಾ ಮಾಧ್ಯಮಕ್ಕೆ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments