Select Your Language

Notifications

webdunia
webdunia
webdunia
Friday, 11 April 2025
webdunia

ವಿಷ್ಣುವರ್ಧನ್ ನಿಧನದ ನಂತ್ರ ದ್ವಾರಕೀಶ್ ಕುಗ್ಗಿ ಹೋಗಿದ್ದರು: ನಟ ಸುಂದರರಾಜ್

Dwarakish Live Update

Sampriya

ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2024 (17:03 IST)
Photo Courtesy X
ಬೆಂಗಳೂರು: ಡಾ. ವಿಷ್ಣುವರ್ಧನ್ ನಿಧನದ ನಂತರ ದ್ವಾರಕೀಶ್ ಅವರು ಕುಗ್ಗಿ ಹೋಗಿದ್ದರು. ಕೆಲ ವಿಚಾರಗಳಿಂದ ಅವರು ದೂರವಾಗಿದ್ದರೂ ಬಿಟ್ರೆ ಅವರಿಬ್ಬರ ಸ್ನೇಹ ಬಿಡಿಸಲಾಗದ್ದು ಎಂದು ಕನ್ನಡದ ಹಿರಿಯ ನಟ ನಟ ಸುಂದರರಾಜ್ ನೆನಪಿಸಿಕೊಂಡರು.

ವಿಷ್ಣು ಹಾಗೂ ದ್ವಾರಕೀಶ್ ಸ್ನೇಹದ ಬಗ್ಗೆ ಮಾತನಾಡಿದ ಅವರು, ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರದ್ದು ಉತ್ತಮ ಸ್ನೇಹವಾಗಿತ್ತು. ಸಿನಿಮಾ ವಿಚಾರಕ್ಕೆ ಅಷ್ಟೇ ಅವರು ಮುನಿಸಿಕೊಂಡಿದ್ದರು.  ದ್ವಾರಕೀಶ್‌ಗೆ ವಿಷ್ಣುವರ್ಧನ್ ಜತೆಗೆ ಮಾಡಿದ ಸಿನಿಮಾಗಳೆಲ್ಲ ಯಶಸ್ಸಿ ತಂದುಕೊಡುತ್ತಿದ್ದವು. ಅದರ ಲಾಭದಲ್ಲಿ ದ್ವಾರಕೀಶ್ ಬೇರೆ ಭಾಷೆಗೆ ಬಂಡವಾಳ ಹಾಕುತ್ತಿದ್ದ ಎಂಬ ನೋವಿತ್ತು. ಈ ವಿಚಾರ ಇಬ್ಬರನ್ನು ದೂರ ಮಾಡಿತ್ತು. ಆದರೆ ಬೇರೆ ವಿಚಾರದಲ್ಲಿ ಅವರಿಬ್ಬರ ಸ್ನೇಹ ಉತ್ತಮವಾಗಿತ್ತು ಎಂದರು.

ಇಬ್ಬರು ಜಗಳದಲ್ಲಿ ಮೂರನೇ ವ್ಯಕ್ತಿ ಹೋಗಬಾರದು. ಆಗ ಜಗಳ ಬೇರೆ ರೀತಿಯಾಗಿ ಕಾಣಿಸಿಕೊಳುತ್ತದೆ. ಆದರೆ ದ್ವಾರಕೀಶ್ ಹಾಗೂ ವಿಷ್ಣ ಸ್ನೇಹ ತುಂಬಾನೇ ಪವಿತ್ರವಾದದ್ದು. ಇನ್ನೂ ವಿಷ್ಣುವರ್ಧನ್ ಅವರು ತೀರಿಕೊಂಡ ನಂತರ ದ್ವಾರಕೀಶ್ ಕುಗ್ಗಿ ಹೋಗಿದ್ದರು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ತೀರಿಕೊಂಡ ದಿನ, ಸಮಯಕ್ಕೆಯೇ ಕೊನೆಯುಸಿರೆಳೆದ ದ್ವಾರಕೀಶ್