Select Your Language

Notifications

webdunia
webdunia
webdunia
webdunia

ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ನಿರ್ಮಿಸುತ್ತಾ ’ಚೌಕ’

ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ನಿರ್ಮಿಸುತ್ತಾ ’ಚೌಕ’
Bangalore , ಶುಕ್ರವಾರ, 2 ಡಿಸೆಂಬರ್ 2016 (13:23 IST)
ಕರ್ನಾಟಕ ಪ್ರಚಂಡ ಕುಳ್ಳ ಎಂದು ಖ್ಯಾತರಾಗಿರುವ ದ್ವಾರಕೀಶ್ ಅವರು ಭಾರಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಚಿತ್ರ ಚೌಕ. ಈ ಚಿತ್ರದ ವಿಶೇಷಗಳು ಒಂದೆರಡಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸುತ್ತಿರುವುದು ಅವುಗಳಲ್ಲಿ ಒಂದು. 
 
ಇನ್ನೊಂದು ವಿಶೇಷ ಎಂದರೆ ಇದು ದ್ವಾರಕೀಶ್ ನಿರ್ಮಾಣದ 50ನೇ ಚಿತ್ರ. ಸಾಮಾನ್ಯವಾಗಿ ಒಂದು ಚಿತ್ರ ಎಂದರೆ ಒಬ್ಬರೇ ಛಾಯಾಗ್ರಾಹಕರು ಇರ್ತಾರೆ. ಇಲ್ಲಾ ಅಪರೂಪಕ್ಕೆ ಎಂಬಂತೆ ಇಬ್ಬರು ಮೂವರು ಇರಬಹುದು. ಆದರೆ ಈ ಚಿತ್ರಕ್ಕೆ ಐದು ಮಂದಿ ಛಾಯಾಗ್ರಕರು. 
 
ಅಷ್ಟೇ ಅಲ್ಲ 5 ಮಂದಿ ಸಂಗೀತ್ ನಿರ್ದೇಶಕರು, ಡೈಲಾಗ್ ರೈಟರ್ಸ್, ಕಲಾ ನಿರ್ದೇಶಕರು ಕೆಲಸ ಮಾಡಿದ್ದಾರೆ. ಸ್ಯಾಂಡಲ್‌ವುಡ್ ಮಟ್ಟಿಗೆ ಹೇಳುವುದಾದರೆ ಇದೊಂದು ದಾಖಲೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಒಂದೊಂದು ಹಾಡನ್ನು ಒಬ್ಬೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಕಂಪೋಸ್‌ ಮಾಡುತ್ತಿದ್ದಾರೆ. ಈಗಾಗಲೇ ಅರ್ಜುನ್‌ ಜನ್ಯ ಕೆಲಸ ಶುರು ಹಚ್ಚಿಕೊಂಡಿದ್ದಾಗಿದೆ ಎಂಬ ವಿಷಯ ಮಾತ್ರ ಸದ್ಯಕ್ಕೆ ಬಹಿರಂಗಗೊಂಡಿದೆ.
 
ಕನ್ನಡ ಚಿತ್ರರಂಗದ ಜನಪ್ರಿಯ ಛಾಯಾಗ್ರಾಹಕರಾದ ಸತ್ಯ ಹೆಗಡೆ, "ಮುಂಗಾರು ಮಳೆ' ಕೃಷ್ಣ, ಸಂತೋಷ್‌ ರೈ ಪಾತಾಜೆ, ಸುಧಾಕರ್‌ ರಾಜ್‌ ಮತ್ತು ಶೇಖರ್‌ ಚಂದ್ರು ಈ ಚಿತ್ರದ ಒಂದೊಂದು ಟ್ರಾಕ್‌ ಸೆರೆ ಹಿಡಿಯುತ್ತಿರುವ ಛಾಯಾಗ್ರಾಹಕರು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹ್ಯಾಟ್ರಿಕ್ ಹೀರೋ ಶಿವಣ್ಣ ಮುಂದಿನ ವರ್ಷವೂ ರಾಕಿಂಗ್