ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದ್ರೆ ಸ್ಯಾಂಡಲ್‌ವುಡ್‌ನಲ್ಲಿ ಒಂದು ರೀತಿ ಪಾದರಸ ಇದ್ದಂತೆ. ಸದಾ ಪುಟಿಯುವ ಉತ್ಸಾಹಿ ಕಲಾವಿದ ಅವರು. ಈ ವರ್ಷ ಅವರ ಬಹುತೇಕ ಚಿತ್ರಗಳು ಪ್ರೇಕ್ಷಕರನ್ನು ರಂಜಿಸಿವೆ. ಅದಕ್ಕಿಂತಲೂ ಹೆಚ್ಚಾಗಿ ನಿರ್ಮಾಪಕರ ಜೋಳಿಗೆಯನ್ನೂ ತುಂಬಿವೆ.
ಈ ವರ್ಷದ ಮೊದಲ ಚಿತ್ರ ಕಿಲ್ಲಿಂಗ್ ವೀರಪ್ಪನ್ ಸಕ್ಸಸ್ ಆಯಿತು. ಈ ಚಿತ್ರದ ಮೂಲಕ ಟಾಲಿವುಡ್‌ಗೂ ಶಿವಣ್ಣ ಪರಿಚಯವಾದರು. ಅದಾದ ಬಳಿಕ ಬಂದ ಶಿವಲಿಂಗ ಚಿತ್ರವೂ ಬಾಕ್ಸ್ ಆಫೀಸಲ್ಲಿ ಭರ್ಜರಿ ಬೆಳೆ ತೆಗೆಯಿತು.
ಆಮೇಲೆ ಬಂದದ್ದು ಸಂತೆಯಲ್ಲಿ ನಿಂತ ಕಬೀರ. ಮಾಸ್ ಯುಗದಲ್ಲಿ ಭಕ್ತಿ ಪ್ರಧಾನ ಚಿತ್ರ ಯಾರ್ ನೋಡ್ತಾರೆ ಅಂದುಕೊಂಡ್ರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದಿದ್ದರೂ ಶಿವಣ್ಣನ ಅಭಿನಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಒಬ್ಬ ಕಲಾವಿದನಿಗೆ ಇದಕ್ಕಿಂತ ಇನ್ನೇನು ಬೇಕು?
ಇದೆಲ್ಲಾ ಈ ವರ್ಷದ ಮಾತಾಯಿತು. ಮುಂದಿನ ವರ್ಷಕ್ಕೂ ಶಿವಣ್ಣ ಒಂದಷ್ಟು ಅಸ್ತ್ರಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಶ್ರೀಕಂಠ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಲೀಡರ್ ಚಿತ್ರಗಳು ಮುಖ್ಯವಾದವು. ಒಂದಕ್ಕಿಂತ ಒಂದು ಭಿನ್ನವಾದ ಸಬ್ಜೆಕ್ಟ್ ಗಳು. ಶಿವಣ್ಣ ಮುಂದಿನ ವರ್ಷವೂ ರಾಕಿಂಗ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.