Publish Date: Thu, 23 Mar 2017 (10:12 IST)
Updated Date: Thu, 23 Mar 2017 (10:16 IST)
ಬೆಂಗಳೂರು: ದುನಿಯಾ ವಿಜಯ್ ಎಂದರೆ ಆಗಾಗ ಕೆಟ್ಟ ಕಾರಣಗಳಿಂದಾಗಿಯೇ ಸುದ್ದಿಯಲ್ಲಿರುತ್ತಾರೆ. ಅವರೊಂಥರಾ ಬ್ಯಾಡ್ ಬಾಯ್ ಇಮೇಜ್ ಪಡೆದುಕೊಂಡ ಒಳ್ಳೆಯ ನಟ. ತಮ್ಮನ್ನು ಜನ ನೋಡುವ ದೃಷ್ಟಿಯೇ ಹಾಗಾಗಿದೆ ಎನ್ನುತ್ತಾರವರು.
ಆದರೆ ನಾನಿರೋದು ಹಾಗಲ್ಲ. ನನ್ನ ಮನಸು ಹಾಗಲ್ಲ ಎಂದು ಜನಕ್ಕೆ ತೋರಿಸಬೇಕು ಎಂದು ಆತ್ಮಕತೆ ಬರೆಯಲು ಹೊರಟಿದ್ದಾರಂತೆ ವಿಜಿ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ.
ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಖರೀದಿಸಿ, ಓದುತ್ತಿದ್ದಾರಂತೆ. ಆ ಮೂಲಕ ತನ್ನ ಆತ್ಮಕತೆ ಬರೆಯುವ ಶೈಲಿ ಚೆನ್ನಾಗಿರಬೇಕೆಂಬುದು ಅವರ ಬಯಕೆ. ಯುವಕರು ಮೊಬೈಲ್, ಇಂಟರ್ ನೆಟ್ ಎಂದು ಹಾಳಾಗುವುದನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಬೇಕೆಂಬ ಉದ್ದೇಶದಿಂದ ಬರೆಯಲು ಹೊರಟಿದ್ದಾರಂತೆ. ಓದಲು ನಾವು ರೆಡಿಯಾಗಬೇಕಷ್ಟೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ