Select Your Language

Notifications

webdunia
webdunia
webdunia
webdunia

ರಂಭಾಗೆ ಚೆನ್ನೈ ಫ್ಯಾಮಿಲಿ ಕೋರ್ಟ್ ಹೇಳಿದ್ದು

ರಂಭಾಗೆ ಚೆನ್ನೈ ಫ್ಯಾಮಿಲಿ ಕೋರ್ಟ್ ಹೇಳಿದ್ದು
ಚೆನ್ನೈ , ಬುಧವಾರ, 22 ಮಾರ್ಚ್ 2017 (12:14 IST)
ಸಂಧಾನದ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಂತೆ ಚೆನ್ನೈ ಕೌಟುಂಬಿಕ ನ್ಯಾಯಾಲಯ ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಮತ್ತು ಪರಿತ್ಯಕ್ತ ಪತಿ ಇಂದ್ರಕುಮಾರ್`ಗೆ ಸೂಚಿಸಿದೆ.

ಅಮೆರಿಕದಲ್ಲಿ ನೆಲೆಸಿರುವ ತನ್ನ ಪರಿತ್ಯಕ್ತ ಪತಿ ಇಂದ್ರಕುಮಾರ್` ಅವರನ್ನ ತನ್ನ ಜೊತೆ ಜೀವಿಸಲು ಸೂಚಿಸಬೇಕು ಮತ್ತು ತನಗೆ ಜೀವನದ ಖರ್ಚಿಗಾಗಿ ತಿಂಗಳಿಗೆ 2. 5 ಲಕ್ಷ ರೂ. ಕೊಡಿಸುವಂತೆ ಕೋರಿ ರಂಭಾ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್ ವಿಚಾರಣೆ ವೇಳೆ ರಂಭಾ ತನ್ನ ಇಬ್ಬರೂ ಮಕ್ಕಳೊಂದಿಗೆ ಹಾಜರಾಗಿದ್ದರು. ಪತಿ ಇಂದ್ರಕುಮಾರ್ ಸಹ ಉಪಸ್ಥಿತರಿದ್ದರು.

ಈ ಸಂದರ್ಭ, ಇದು ಕೌಟುಂಬಿಕ ವಿಚಾರವಾಗಿರುವುದರಿಂದ ಹೈಕೋರ್ಟ್`ನ ಕೌನ್ಸೆಲಿಂಗ್ ಸೆಂಟರ್`ನಲ್ಲಿ ಕುಳಿತು ಮಾತುಕತೆ ನಡೆಸಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸುಚಿಸಿದೆ. ಒಂದೊಮ್ಮೆ ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಡಿವೋರ್ಸ್ ನಿರ್ಧಾರ ಮುಂದುವರೆದರೆ ಮತ್ತೆ ಇಲ್ಲಿಗೆ ಬನ್ನಿ ಎಂದು ಸೂಚಿಸಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸೂಪರ್ ಸ್ಟಾರ್ ರಜನೀಕಾಂತ್ ಬಿಜೆಪಿ ಸೇರ್ತಾರಾ?!