Select Your Language

Notifications

webdunia
webdunia
webdunia
webdunia

900 ಟಿಕೆಟ್`ಗಳಲ್ಲಿ ಸೇಲ್ ಆಗಿದ್ದು 16 ಮಾತ್ರ.. ಡಬ್ಬಿಂಗ್ ಚಿತ್ರ ಬಿಡುಗಡೆಗೆ ತೀವ್ರ ಹಿನ್ನಡೆ

900 ಟಿಕೆಟ್`ಗಳಲ್ಲಿ ಸೇಲ್ ಆಗಿದ್ದು 16 ಮಾತ್ರ..  ಡಬ್ಬಿಂಗ್ ಚಿತ್ರ ಬಿಡುಗಡೆಗೆ ತೀವ್ರ ಹಿನ್ನಡೆ
ಬೆಂಗಳೂರು , ಶುಕ್ರವಾರ, 3 ಮಾರ್ಚ್ 2017 (12:17 IST)
ತಮಿಳು ನಟ ಅಜಿತ್ ಅಭಿನಯದ ತಮಿಳಿನ ಡಬ್ಬಿಂಗ್ ಚಿತ್ರ ಸತ್ಯದೇವ್ ಐಪಿಎಸ್ ಬಿಡುಗಡೆಗೆ ರಾಜ್ಯದಲ್ಲಿ ಹಿನ್ನಡೆಯಾಗಿದೆ. . ಒಂದೆರಡು ಕಡೆ ಬಿಟ್ಟರೆ ಬಹುತೇಕ ರಾಜ್ಯಾದ್ಯಂತ ಚಿತ್ರ ಪ್ರದರ್ಶನ ರದ್ದಾಗಿದೆ. ಕನ್ನಡಪರ ಸಂಘಟನೆ ಪ್ರತಿಭಟನೆಗೆ ಬೆದರಿದ ನಿರ್ಮಾಪಕರು ಈ ನಿರ್ಧಾರ ಕೈಗೊಂಡಿದ್ದಾರೆ.


ಬಳ್ಲಾರಿ ಒಂದು ಥಿಯೇಟರ್ ಮತ್ತು ಮಂಗಳೂರಿನ ಸುಚಿತ್ರಾ ಥಿಯೇಟರ್`ನಲ್ಲಿ ಮಾತ್ರ ಚಿತ್ರ ಪ್ರದರ್ಶನ ಕಾಣುತ್ತಿದೆ. ಮಂಗಳೂರಿನ ಥಿಯೇಟರ್`ನಲ್ಲಿ 900 ಟಿಕೆಟ್`ಗಳ ಪೈಕಿ ಕೇವಲ 16 ಟಿಕೆಟ್ ಸೇಲ್ ಆಗಿವೆ ಎಂದು ತಿಳಿದುಬಂದಿದೆ.

ಇತ್ತ, ಡಬ್ಬಿಂಗ್ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಜನಿಕಾಂತ್ ಅಳಿಯ ಧನುಷ್ ಡಿಎ‌ನ್‌ಎ ಪರೀಕ್ಷೆಗೆ ಕೋರ್ಟ್ ಸೂಚನೆ