Webdunia - Bharat's app for daily news and videos

Install App

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Sampriya
ಭಾನುವಾರ, 18 ಮೇ 2025 (16:11 IST)
Photo Credit X
ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ದಂಪತಿಯ ಹಿರಿಯ ಮಗಳು ಧೃತಿ ಅವರು ವಿದೇಶದಲ್ಲಿ ಪದವಿ ಪಡೆದಿದ್ದಾರೆ.

ಮಗಳ ಪದವಿ ಸಮಾರಂಭದಲ್ಲಿ ತಾಯಿ ಅಶ್ವಿನಿ, ಸಹೋದರಿ, ಸಹೋದರ ವಿನಯ್ ಭಾಗವಹಿಸಿದ್ದರು. ಇದೀಗ ಮಗಳ ಸಾಧನೆಯನ್ನು ದೊಡ್ಡಪ್ಪ ಶಿವರಾಜ್‌ಕುಮಾರ್‌ ಕೊಂಡಾಡಿದ್ದಾರೆ.

ಹಾಯ್‌ ಟೋಟೊ, ಕಾಂಗ್ರಾಚ್ಯುಲೇಶನ್‌. ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ. ನೀನು ನನಗೆ ತುಂಬಾ ಹೆಮ್ಮೆ ತಂದಿದ್ದೀಯಾ. ಅಪ್ಪು, ಅಶ್ವಿನಿ, ನುಕ್ಕಿ ಹಾಗೂ ನಿನ್ನೊಂದಿಗೆ ಸಾಕಷ್ಟು ಸುಂದರ ನೆನಪುಗಳಿವೆ.  ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ . ನಿನ್ನಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ.  ಪದವಿ ಪಡೆದಿದ್ದಾಗ ಮತ್ತೊಮ್ಮೆ ಶುಭಾಶಯಗಳು ಟೊಟೊ ಎಂದು ಬರೆದುಕೊಂಡಿದ್ದಾರೆ.

 ಕಳೆದ ಕೆಲ ವರ್ಷಗಳಿಂದ ಫಾರಿನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರು. ವಿದೇಶದಲ್ಲಿ ಓದಿ ಅವರ ವಿದ್ಯಾಭ್ಯಾಸ ಪೂರ್ಣಗೊಂಡಿದ್ದು, ಧೃತಿ ಪುನೀತ್‌ ರಾಜ್‌ಕುಮಾರ್‌ ಪದವಿಯನ್ನೂ ಪಡೆದಿದ್ದಾರೆ. ಹಾಗಾಗಿ ದೊಡ್ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗಳು ಪದವೀಧರೆ ಆದ ಖುಷಿಯಲ್ಲಿ ದೊಡ್ಡಪ್ಪ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ವಿಶೇಷವಾಗಿ ಸಂಭ್ರಮಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

ಮುಂದಿನ ಸುದ್ದಿ
Show comments