Publish Date: Mon, 17 Oct 2016 (18:54 IST)
Updated Date: Mon, 17 Oct 2016 (18:56 IST)
ಅವಿಭಕ್ತ ಕುಟುಂಬವಾಗಿದ್ದ ನಟ ಸಾರ್ವಭೌಮ ಅಣ್ಣಾವ್ರ ಸಂಪತ್ತು ವಿಭಜನೆಯಾಗಿದ್ದು, ತಮ್ಮ ಐದು ಮಕ್ಕಳಿಗೆ ಸರಿ ಸಮವಾಗಿ ಹಂಚಿಕೆ ಮಾಡಲಾಗಿದೆ.
ಚಾಮರಾಜ ನಗರದ ಬಳಿಯಿರುವ ಗಾಜನೂರಿನಲ್ಲಿರುವ ಒಟ್ಟು 60 ಎಕರೆ ಭೂಮಿಯನ್ನು ಅಣ್ಣಾವ್ರ ಮಕ್ಕಳಾದ ರಾಘವೇಂದ್ರ ರಾಜಕುಮಾರ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಲಕ್ಷ್ಮೀ ಹಾಗೂ ಪೂರ್ಣಿಮಾ ಅವರು ತಳವಾಡಿ ಸಬ್‌ರಿಜಿಸ್ಟಾರ್ ಆಫೀಸಿನಲ್ಲಿ ತಮಗೆ ಬಂದಿರುವ ಆಸ್ತಿಯನ್ನು ನೋಂದಣಿ ಮಾಡಿಕೊಂಡರು.
ನಟ ಸಾರ್ವಭೌಮ ಡಾ.ರಾಜಕುಮಾರ್ ಅವರು ಬರೆದಿರುವ ವಿಲ್‌ನಂತೆಯೇ ಆಸ್ತಿ ವಿಭಜನೆಯಾಗಿದ್ದು, ಯಾವುದೇ ವ್ಯಾಜ್ಯಗಳಿಗೆ ಆಸ್ಪದ ನೀಡದೆ ಮಕ್ಕಳು ತಮ್ಮ ಪಾಲಿಕೆ ಬಂದ ಪಂಚಾಮೃತವನ್ನು ಖುಷಿಯಿಂದ ಸ್ವೀಕರಿಸಿದರು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಘವೇಂದ್ರ ರಾಜಕುಮಾರ್, ಅಪ್ಪಾಜಿ ಬದುಕಿರುವಾಲೇ ವಿಲ್ ಬರೆದಿಟ್ಟಿದ್ದರು. ಅಪ್ಪಾಜಿ ಆಸೆಯಂತೆ ಆಸ್ತಿ ಹಂಚಿಕೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ