Webdunia - Bharat's app for daily news and videos

Install App

ದರ್ಶನ್ ನೋಡಲು ಬರುವ ಸೆಲೆಬ್ರಿಟಿಗಳ ಮೇಲೂ ಶುರುವಾಯ್ತು ಅನುಮಾನ: ರೌಡಿಗಳಿಗೆ ಪೇಮೆಂಟ್ ಆಗ್ತಿತ್ತಾ

Krishnaveni K
ಮಂಗಳವಾರ, 27 ಆಗಸ್ಟ್ 2024 (09:46 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಈಗ ಹಲವು ಅನುಮಾನಗಳು ಶುರುವಾಗಿದೆ. ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಲು ವಿಲ್ಸನ್ ಗಾರ್ಡನ್ ನಾಗನದ್ದೇ ಪಾರುಪತ್ಯ ಎನ್ನಲಾಗಿದೆ. ಹೀಗಾಗಿ ಈಗ ದರ್ಶನ್ ನೋಡಲು ಬರುತ್ತಿದ್ದ ಸೆಲೆಬ್ರಿಟಿಗಳ ಬಗ್ಗೆಯೂ ಅನುಮಾನ ಶುರುವಾಗಿದೆ.

ಈ ಹಿಂದೆ ಜೈಲಿನಲ್ಲಿದ್ದು ಈಗ ಬಿಡುಗಡೆಯಾಗಿರುವ ಖೈದಿಯೊಬ್ಬರು ಮಾಧ್ಯಮ ಸಂದರ್ಶನದ ವೇಳೆ ಜೈಲಿನಲ್ಲಿ ರಾಜಾತಿಥ್ಯ ನೀಡಲು ಹಿರಿಯ ಖೈದಿಗಳ ಪಡೆಯೇ ಇದೆ. ಈ ಖೈದಿಗಳಿಗೆ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ. ಖೈದಿಗಳನ್ನು ಭೇಟಿ ಮಾಡಲು ಬರುವವರಿಂದ ಫೋನ್ ಪೇ ಅಥವಾ ಇನ್ನಿತರ ಮಾರ್ಗಗಳ ಮೂಲಕ ಅವರು ಪೇಮೆಂಟ್ ಮಾಡಿಸಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಆತಿಥ್ಯ ನೀಡುತ್ತಿದ್ದರು ಎಂದಿದ್ದರು.

ಹೀಗಾಗಿ ಈಗ ದರ್ಶನ್ ನೋಡಲೆಂದು ಪದೇ ಪದೇ ಬರುತ್ತಿದ್ದ ಸೆಲೆಬ್ರಿಟಿಗಳ ಮೇಲೆಯೇ ಅನುಮಾನ ಶುರುವಾಗಿದೆ. ಇದಲ್ಲದೆ ಇನ್ನೊಂದು ಮೂಲಗಳ ಪ್ರಕಾರ ಪ್ರತೀ ಬಾರಿ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ದರ್ಶನ್ ನೇರವಾಗಿ ರೌಡಿ ನಾಗನ ಬಳಿಗೆ ಹೋಗುತ್ತಿದ್ದರಂತೆ. ಇದು ಯಾಕೆ ಎಂಬ ಪ್ರಶ್ನೆಯೂ ಇದೆ.

ದರ್ಶನ್ ಗೆ ಬಿರಿಯಾನಿ, ಮದ್ಯ, ಸಿಗರೇಟು ಮುಂತಾದ ಎಲ್ಲದಕ್ಕೂ ವ್ಯವಸ್ಥೆಯಾಗಿತ್ತು. ಇದಕ್ಕೆಲ್ಲಾ ಹಣದ ವ್ಯವಸ್ಥೆ ಯಾರು ಮಾಡಿದ್ದರು ಎಂಬ ಅನುಮಾನವಿದೆ. ಈ ನಿಟ್ಟಿನಲ್ಲೂ ಪೊಲೀಸರು ಕೂಲಂಕುಷವಾದ ತನಿಖೆ ನಡೆಸಬೇಕಾದ ಅಗತ್ಯವಿದೆ. ಅಲ್ಲದೆ, ಜೈಲಿನ ಅಧಿಕಾರಿಗಳೇ ಖೈದಿಗಳಿಂದ ಹಣ ಪಡೆದು ಕೆಲವೊಂದು ಸಮಯದಲ್ಲಿ ಮೊಬೈಲ್ ಬಳಕೆಗೆ ಜಾಮರ್ ಆಫ್ ಮಾಡುತ್ತಿದ್ದರು. ಇದರಿಂದಾಗಿಯೇ ಪರಪ್ಪನ ಅಗ್ರಹಾರ ಸುತ್ತಮುತ್ತ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿದ್ದರೂ ಜೈಲಿನಿಂದ ಖೈದಿಗಳಿಗೆ ಫೋನ್ ಬಳಕೆ ಸಾಧ್ಯವಾಗುತ್ತಿದೆ ಎಂಬ ಆರೋಪಗಳಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಲ್ಮಾನ್‌ ಖಾನ್‌ ಮತ್ತಷ್ಟು ಗಟ್ಟಿಯಾಗಿ ವಾಪಾಸ್ಸಾಗುತ್ತಾರೆ: ಇಮ್ರಾನ್ ಹಸ್ಮಿ ಹೀಗಂದಿದ್ಯಾಕೆ

ಕ್ರೈಸ್ತರ ಭಾವನೆಗೆ ಅಗೌರವ: ನಟ ಸನ್ನಿ ಡಿಯೋಲ್, ರಣದೀಪ್ ವಿರುದ್ಧ ಪ್ರಕರಣ ದಾಖಲು

ವಿಶೇಷ ಬೇಡಿಕೆಯನ್ನು ಮುಂದಿಟ್ಟ ಬಳುಕುವ ಬಳ್ಳಿ ಊರ್ವಸಿ, ಟ್ರೋಲ್ ಆದ ನಟಿ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ದಾಂಪತ್ಯಕ್ಕೆ 5 ವರ್ಷದ ಸಂಭ್ರಮ: ಪತ್ನಿ ರೇವತಿಗೆ ವಿಶೇಷವಾಗಿ ಶುಭಕೋರಿದ ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments