Webdunia - Bharat's app for daily news and videos

Install App

ಡಾಲಿ ಧನಂಜಯ ಹೊಸ ಸಿನಿಮಾದ ಟೈಟಲ್‌ ಘೋಷಣೆ

Dolly Dhanunjay New Film
Sampriya
ಮಂಗಳವಾರ, 9 ಏಪ್ರಿಲ್ 2024 (14:04 IST)
Photo Courtesy X
ಬೆಂಗಳೂರು: ಟಗರು ಖ್ಯಾತಿಯ ಡಾಲಿ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರದ ಟೈಟಲ್‌ ಅನ್ನು ಯುಗಾದಿ ಸಂದರ್ಭದಲ್ಲಿ ಘೋಷಣೆ ಆಗಿದೆ.

ಪರಮ್ ನಿರ್ದೇಶನದ ಮೊದಲ ಚಿತ್ರಕ್ಕೆ ಡಾಲಿ ಹೀರೋ ಆಗಿದ್ದಾರೆ. ಪರಮ್ ಅವರು ಈ ಮೊದಲು ಕಲರ್ಸ್ ಕನ್ನಡದ ಹೆಡ್ ಆಗಿದ್ದರು. ಈ ಸಿನಿಮಾಗೆ ಕೋಟಿ ಅನ್ನೋ ಟೈಟಲ್ ಇಡಲಾಗಿದೆ. ಕಿರುತೆರೆಯಲ್ಲಿ ಹತ್ತು ಹಲವು ಪ್ರಯೋಗಗಳ ಮೂಲಕ ಗಮನ ಸೆಳೆದಿರುವ ಅವರು ದೊಡ್ಡ ಪರದೆ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ.

ಕೋಟಿ ಸಿನಿಮಾ ಟೈಟಲ್ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾ ಟೈಟಲ್‌ನಲ್ಲಿ ಕೇವಲ ಧನಂಜಯ್‌ ಅವರ ಕಣ್ಣುಗಳನ್ನು ಮಾತ್ರ ತೋರಿಸಲಾಗಿದೆ. ಮುಖವನ್ನು 500 ರೂಪಾಯಿ ನೋಟಿನಿಂದ ಮುಚ್ಚಲಾಗಿದೆ. ಸದ್ಯ ಈ ಪೋಸ್ಟರ್‌ ಎಲ್ಲರ ಗಮನ ಸೆಳೆಯುತ್ತಿದೆ.‌

ಟೈಟಲ್ ಹೇಳುವಂತೆ ಇದೊಂದು ಹಣದ ಕಥೆ ಎನ್ನಲಾಗಿದೆ. ದುಡ್ಡಿನ ಹಿಂದೆ ಬೀಳುವ ಸಾಮಾನ್ಯ ವ್ಯಕ್ತಿಯ ಕಥೆಯನ್ನು ಈ ಸಿನಿಮಾ ಹೇಳಲಿದೆ ಎನ್ನಲಾಗುತ್ತಿದೆ. ಸದ್ಯ ಟೈಟಲ್ ಪೋಸ್ಟರ್ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನವನ್ನು ಧನಂಜಯ್ ಮಾಡಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ.

ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ಸಂಭಾಷಣೆ ಬರೆದು ಸ್ವತಃ ಪರಮ್‌ ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದರೊಂದಿಗೆ ಸಿನಿಮಾ ಮಾಡಬೇಕು ಎಂಬ ಅವರ ಬಹುದಿನಗಳ ಕನಸು ಈಡೇರಿದೆ. ಚಿತ್ರಕ್ಕೆ ಜ್ಯೋತಿ ದೇಶಪಾಂಡೆ ಬಂಡವಾಳ ಹೂಡಿದ್ದಾರೆ.

 <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Darshan Thoogudeepa: ತೋಟದ ಮನೆಯಲ್ಲಿ ಎತ್ತಿನ ಗಾಡಿ ಮೇಲೆ ನಟ ದರ್ಶನ್ ಫುಲ್ ಮಜಾ Video

ಮುಂದಿನ ಸುದ್ದಿ
Show comments