Webdunia - Bharat's app for daily news and videos

Install App

ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲ್ಲ ಎಂದ ಡಾಲಿ ಧನಂಜಯ್: ಎಲ್ಲದಕ್ಕೂ ಡಿ ಬಾಸ್ ಕಾರಣನಾ

Krishnaveni K
ಬುಧವಾರ, 21 ಆಗಸ್ಟ್ 2024 (14:46 IST)
ಬೆಂಗಳೂರು: ಈ ಬಾರಿ ತಾನು ಅದ್ಧೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ನಟ ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆಲ್ಲಾ ಡಿ ಬಾಸ್ ದರ್ಶನ್ ಕಾರಣನಾ ಎಂಬ ಅನುಮಾನ ಮೂಡುತ್ತಿದೆ.

ಆಗಸ್ಟ್ 23 ರಂದು ಡಾಲಿ ಧನಂಜಯ್ ಹುಟ್ಟುಹಬ್ಬವಿದೆ. ಆದರೆ ಈ ಬಾರಿ ಕಾರಣಾಂತರಗಳಿಂದ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ. ನೀವು ಎಲ್ಲಿದ್ದೀರೋ ಅಲ್ಲಿಂದಲೇ ನನಗೆ ಹರಸಿ ಸಾಕು ಎಂದು ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಣೆ ನೀಡಿದ್ದಾರೆ.

ಅದರೆ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಬೇಸರ ತಂದಿದೆ. ಸ್ಯಾಂಡಲ್ ವುಡ್ ನಲ್ಲಿ ಪೋಷಕ ನಟನಾಗಿ ಎಂಟ್ರಿ ಕೊಟ್ಟು ಇಂದು ಹೀರೋ ಆಗಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಡಾಲಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಡಿ ಬಾಸ್ ಕಾರಣನಾ ಎಂಬ ಅನುಮಾನ ಮೂಡಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಆಪ್ತ ವಲಯದಲ್ಲಿ ಧನಂಜಯ್ ಕೂಡಾ ಒಬ್ಬರು. ದರ್ಶನ್ ಬಂಧನದ ಬಗ್ಗೆ ಈ ಹಿಂದೆ ಮಾಧ್ಯಮಗಳು ಕೇಳಿದಾಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದಿದ್ದರು. ಆದರೆ ಈಗ ದರ್ಶನ್ ಜೈಲಿನಲ್ಲಿ ಬಂಧಿಯಾಗಿರುವಾಗ ಸಂಭ್ರಮಾಚರಣೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರಾ ಎಂಬ ಅನುಮಾನ ಮೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರ್ ಗೆ ದೂರು: ದುಡ್ಡು ಬಂದ್ರೂ ಹೀಗೆ ಮಾಡಿದ್ರಾ ಬುಲ್ ಬುಲ್

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಮುಂದಿನ ಸುದ್ದಿ
Show comments