ಬರ್ತ್ ಡೇಗೆ ಪುರುಸೊತ್ತಿಲ್ಲ ಎಂದ ಡಾಲಿ ಧನಂಜಯ್: ಬಡವರ ಮಕ್ಕಳು ಈಗ ಕೈಗೇ ಸಿಗಲ್ಲ ಎಂದ ಫ್ಯಾನ್ಸ್

Krishnaveni K
ಗುರುವಾರ, 21 ಆಗಸ್ಟ್ 2025 (14:00 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಇನ್ನು ಎರಡು ದಿನಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಅಭಿಮಾನಿಗಳು ಮನೆ ಬಳಿ ಬರಬೇಡಿ ಎಂದು ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಬಡವರ ಮಕ್ಕಳು ಬೆಳೆದ ಮೇಲೆ ಕೈಗೇ ಸಿಗಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಆಗಸ್ಟ್ 23 ರಂದು ಡಾಲಿ ಧನಂಜಯ 39 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ನಾನು ಕೆಲಸದ ನಿಮಿತ್ತ ಹೊರಗಡೆ ಇರುತ್ತೇನೆ. ಹೀಗಾಗಿ ಸಂಭ್ರಮಾಚರಣೆಗೆ ನಿಮ್ಮ ಜೊತೆಗೆ ಇರಲಾಗದಿದ್ದರೂ ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ. ಮುಂದಿನ ವರ್ಷ ಡಬಲ್ ಎನರ್ಜಿಯೊಂದಿಗೆ ಜೊತೆಗೆ ಆಚರಿಸೋಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.

ಅವರ ಈ ಒಂದು ಪೋಸ್ಟ್ ಗೆ ಅಭಿಮಾನಿಗಳು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಡವರ ಮಕ್ಕಳು ಬೆಳೆದ ಮೇಲೆ ಅಭಿಮಾನಿಗಳ ಕೈಗೇ ಸಿಗಲ್ಲ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ನಾವೂ ನಿಮ್ಮ ಸಿನಿಮಾ ರಿಲೀಸ್ ದಿನ ಪುರುಸೊತ್ತಿಲ್ಲ ಎಂದು ಥಿಯೇಟರ್ ಗೆ ಬರದೇ ಇದ್ದರೆ ಹೇಗಿರುತ್ತದೆ ಎಂದಿದ್ದಾರೆ.

ಇತ್ತೀಚೆಗೆ ಎಲ್ಲಾ ಸ್ಟಾರ್ ಗಳಿಗೂ ಇದು ಒಂದು ಪ್ಯಾಶನ್ ಆಗಿ ಬಿಟ್ಟಿದೆ. ಹುಟ್ಟುಹಬ್ಬದ ದಿನ ಒಂದು ದಿನ ಅಭಿಮಾನಿಗಳನ್ನು ಭೇಟಿ ಮಾಡಲು ಇವರಿಗೆ ಸಮಯವಿರಲ್ಲ. ಇವರ ಸಿನಿಮಾಗಳನ್ನು ನೋಡಲು ಮಾತ್ರ ಅಭಿಮಾನಿಗಳು ಥಿಯೇಟರ್ ಗೆ ಬರಬೇಕು. ಹೀಗಾಗಿ ನಟರ ಬರ್ತ್ ಡೇಗೆ ಹಣ ಖರ್ಚು ಮಾಡುವ ಬದಲು ನಿಮ್ಮ ಕುಟುಂಬದವರಿಗಾಗಿ ಹಣ ಖರ್ಚು ಮಾಡಿ ಎಂದು ಫ್ಯಾನ್ಸ್ ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಮುಂದಿನ ಸುದ್ದಿ
Show comments