Webdunia - Bharat's app for daily news and videos

Install App

ಸಾಯೋ ಮಾತಾಡ್ಬೇಡಿ ಶಿವಣ್ಣ: ಡಾಲಿ ಧನಂಜಯ್

Webdunia
ಸೋಮವಾರ, 20 ಡಿಸೆಂಬರ್ 2021 (09:40 IST)
ಬೆಂಗಳೂರು: ಬಡವ ರಾಸ್ಕಲ್ ಈವೆಂಟ್ ನಲ್ಲಿ ನಟ ಶಿವರಾಜ್ ಕುಮಾರ್ ಕನ್ನಡ ಬಾವುಟ ಸುಟ್ಟ ಪ್ರಕರಣದ ಬಗ್ಗೆ ಮಾತನಾಡುವಾಗ ಭಾವುಕರಾಗಿ ಕನ್ನಡಕ್ಕಾಗಿ ಸಾಯೋದಕ್ಕೂ ಸಿದ್ಧ ಎಂದಿದ್ದರು. ಈ ಮಾತು ಸ್ಯಾಂಡಲ್ ವುಡ್ ನಟರನ್ನು ಭಾವುಕರಾಗಿಸಿದೆ.

ವೇದಿಕೆಯಲ್ಲಿ ಧ್ವಜಕ್ಕೆ ಹಾನಿಯಾದ ಬಗ್ಗೆ ಮಾತನಾಡುವ 60 ವರ್ಷ ಸಾಕಿದ್ದೀರಿ ನನ್ನ. ಇನ್ನು ಮುಂದೆ ಭಾಷೆಗೋಸ್ಕರ ಹೋರಾಡಿ ಸಾಯಬೇಕು ಎಂದರೆ ನನ್ನ ಜೀವ ಹೋದರೂ ಪರವಾಗಿಲ್ಲ ಎಂದು ವೇದಿಕೆ ಮೇಲೆ ಭಾವುಕರಾಗಿ ಶಿವಣ್ಣ ಮಾತನಾಡಿದ್ದರು.

ಅವರು ಈ ಮಾತು ಹೇಳುತ್ತಿದ್ದಂತೇ ಅಲ್ಲೇ ಇದ್ದ ನಟಿ ತಾರಾ ಹೀಗೆಲ್ಲಾ ಮಾತಾಡ್ಬೇಡಿ ಎನ್ನುತ್ತಾರೆ. ಅಲ್ಲದೆ, ವೇದಿಕೆ ಮೇಲೆ ಬಂದ ಡಾಲಿ ಧನಂಜಯ್ ‘ನೀವು ಸಾಯೋ ಮಾತಾಡ್ಬೇಡಿ ಅಣ್ಣ. ನಾವು ಇಲ್ಲಿರೋ ಎಲ್ಲರೂ ಒಂದೊಂದು ವರ್ಷ ನಿಮಗೇ ಕೊಡ್ತೀವಿ. ಅಷ್ಟು ವರ್ಷ ನೀವು ಬದುಕಬೇಕು ಅಣ್ಣ’ ಎಂದು ಭರವಸೆ ತುಂಬಿದ್ದಾರೆ. ಸಹೋದರ ಪುನೀತ್ ಸಾವನ್ನಪ್ಪಿದ ಬಳಿಕ ಶಿವಣ್ಣ ಯಾವುದೇ ವೇದಿಕೆಗೆ ಬಂದರೂ ಭಾವುಕರಾಗುತ್ತಾರೆ. ಇಂದೂ ಕೂಡಾ ಅಷ್ಟೇ ಭಾವುಕರಾಗಿ ಮಾತನಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಸಿನಿಮಾ ರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ರಜನಿಕಾಂತ್‌: ಮೋದಿಯಿಂದ ಸ್ಪೆಷಲ್ ವಿಶ್‌

ನಟ ಅಜೇಯ ರಾವ್, ಪತ್ನಿ ನಡುವೆ ಅಂತಹದ್ದೇನಾಯ್ತು

ದರ್ಶನ್ ಮತ್ತೆ ಅರೆಸ್ಟ್ ವಿಜಯಲಕ್ಷ್ಮಿ ಹೃದಯ ಚೂರು ಚೂರು

ಪ್ರೀತಿಸಿ ಮದುವೆಯಾಗಿದ್ದ ನಟ ಅಜಯ್ ರಾವ್‌ ದಾಂಪತ್ಯದಲ್ಲಿ ಬಿರುಕು, ಕೋರ್ಟ್ ಮೆಟ್ಟಿಲೇರಿದ ಪತ್ನಿ

ಮುಂದಿನ ಸುದ್ದಿ
Show comments