Publish Date: Mon, 01 Jan 2018 (06:57 IST)
Updated Date: Mon, 01 Jan 2018 (07:06 IST)
ಬೆಂಗಳೂರು : ಕನ್ನಡ ಚಿತ್ರರಂಗದ ಅಭಿನಯಿಸಿದ ಕೆ.ಎಸ್. ಅಶ್ವತ್ಥ್ ಅವರು ಎಲ್ಲರಿಗೂ ಚಿರಪರಿಚಿತರಾದವರು. ಕನ್ನಡ ಸಿನಿಮಾದಲ್ಲಿ ಅನೇಕ ಖ್ಯಾತ ನಟರೊಂದಿಗೆ ಅಭಿನಯಿಸಿದ ಇವರು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಡಿದ್ದಾರೆ. ಈಗ ಅವರ ಮಗನಾದ ಶಂಕರ್ ಅಶ್ವತ್ಥ್ ಅವರು ಕ್ಯಾಬ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಂಕರ್ ಅಶ್ವತ್ಥ್ ಅವರು ಕೂಡ ಕೆಲವು ಸಿನಿಮಾ ಹಾಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಈಗ ಅವಕಾಶಗಳು ಜೀವನ ಸಾಗಿಸಲು ಅವರು ಕ್ಯಾಬ್ ಚಾಲಕನ ಕೆಲಸವನ್ನು ಮಾಡುತ್ತಿದ್ದಾರೆ. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾದಾಗ ಎಲ್ಲರಲ್ಲೂ ಬೇಸರ ಮೂಡಿಸಿತ್ತು.
ಈಗ ಬಿಗ್ ಬಾಸ್ ಸೀಸನ್ 4 ನ ವಿನ್ನರ್ ಪ್ರಥಮ್ ತಮ್ಮ ಮುಂದಿನ ಚಿತ್ರ ‘ಪ್ರಥಮ್ ಬಿಲ್ಡಪ್’ ನಲ್ಲಿ ನಟಿಸಲು ಶಂಕರ್ ಅಶ್ವತ್ಥ ಅವರಿಗೆ ಮುಂಗಡ ಹಣ ನೀಡಿ ಕಾಲ್ ಶೀಟ್ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ