Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ನಲ್ಲಿ ನಟಿ ರಿಯಾ ಚಕ್ರವರ್ತಿ ಬಳಿ ಎಷ್ಟು ಡ್ರಗ್ಸ್ ಇತ್ತು ಗೊತ್ತಾ?

ಲಾಕ್ ಡೌನ್ ನಲ್ಲಿ ನಟಿ ರಿಯಾ ಚಕ್ರವರ್ತಿ ಬಳಿ ಎಷ್ಟು ಡ್ರಗ್ಸ್ ಇತ್ತು ಗೊತ್ತಾ?
ಮುಂಬೈ , ಶುಕ್ರವಾರ, 11 ಸೆಪ್ಟಂಬರ್ 2020 (22:12 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಲಾಕ್ ಡೌನ್ ಸಮಯದಲ್ಲಿ ಖರೀದಿಸಿದ್ದ ಗಾಂಜಾದ ತೂಕ ಈಗ ಹುಬ್ಬೇರುವಂತೆ ಮಾಡಿದೆ.

ಲಾಕ್ ಡೌನ್ ಸಮಯದಲ್ಲಿ ಕೊರಿಯರ್ ಹುಡುಗನೊಬ್ಬ 500 ಗ್ರಾಂ ಗಾಂಜಾವನ್ನು ರಿಯಾ ಚಕ್ರವರ್ತಿಯ ನಿವಾಸಕ್ಕೆ ತಲುಪಿಸಿದ್ದ ಅನ್ನೋದನ್ನು ಎನ್ ಸಿ ಬಿ ಕಂಡುಕೊಂಡಿದೆ. 

ಲಾಕ್‌ಡೌನ್‌ನಲ್ಲಿದ್ದ ರಿಯಾ ಚಕ್ರವರ್ತಿಯ ನಿವಾಸಕ್ಕೆ 500 ಗ್ರಾಂ ಗಾಂಜಾ ಕೊರಿಯರ್ ವಿತರಿಸಿದ ವ್ಯಕ್ತಿಯೊಂದಿಗೆ ಎನ್‌ಸಿಬಿ ಮಾತನಾಡಿದೆ ಎಂದು ವರದಿಯಾಗಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಈ ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಸುಶಾಂತ್ ಸಿಂಗ್ ರಜಪೂತ್ ಅವರ ನಿವಾಸದಲ್ಲಿ ಗಾಂಜಾ ಸೇವನೆ ಸ್ಕ್ಯಾನರ್ ಅಡಿಯಲ್ಲಿ ಬಂದಿದೆ.

ಎನ್‌ಸಿಬಿಯು ರಿಯಾ ಚಕ್ರವರ್ತಿ, ಶೋಯಿಕ್ ಚಕ್ರವರ್ತಿ, ಜೈದ್ ವಿಲಾತ್ರಾ, ದೀಪೇಶ್ ಸಾವಂತ್, ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ಅಬ್ದುಲ್ ಬಸಿತ್ ಪರಿಹಾರ್ ಅವರನ್ನು ಬಂಧಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಗೆ ಬಿಗ್ ಶಾಕ್