ಜೀವ್ನಾನೇ ನಾಟ್ಕ ಸಾಮಿ ಸಿನಿಮಾ ವಿವಾದದ ಬಗ್ಗೆ ನಿರ್ದೇಶಕರ ಸ್ಪಷ್ಟನೆ

Webdunia
ಸೋಮವಾರ, 23 ಆಗಸ್ಟ್ 2021 (09:40 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ವಿವಾದಗಳೂ ಹುಟ್ಟಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಹೊಸಬರ ಚಿತ್ರ ವಿವಾದಕ್ಕೀಡಾದರೆ ಅದು ಚಿತ್ರತಂಡಕ್ಕೆ, ಕಲಾವಿದರು, ತಂತ್ರಜ್ಞರಿಗೆ ದೊಡ್ಡ ಹೊಡೆತ ನೀಡುತ್ತದೆ.


ಕಿರಣ್ ರಾಜ್-ಶ್ರೀಹರ್ಷ ಪ್ರಮುಖ ಪಾತ್ರದಲ್ಲಿರುವ ಜೀವ್ನಾನೇ ನಾಟ್ಕ ಸಾಮಿ ಎಂಬ ಸಿನಿಮಾ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಬಂದಿರುವ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ರಿಯಾಲಿಟಿ ಶೋಗಳ ಕತೆ-ವ್ಯಥೆ ಬಗ್ಗೆ ಈ ಸಿನಿಮಾ ಮಾಡಲಾಗಿತ್ತು. ಸಹಜವಾಗಿಯೇ ಈ ಸಿನಿಮಾದಲ್ಲಿ ರಿಯಾಲಿಟಿ ಶೋಗಳ ತೆರೆಯ ಹಿಂದಿನ ಸತ್ಯ ದರ್ಶನ ಮಾಡಿಸಲಾಗಿದೆ.

ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬಗ್ಗೆ ಇದೀಗ ನಿರ್ದೇಶಕ ರಾಜು ಭಂಡಾರಿ ರಾಜಾವರ್ತ ಸ್ಪಷ್ಟನೆ ನೀಡಿದ್ದಾರೆ. ‘ಯಾರನ್ನೂ ನೋಯಿಸಬೇಕು ಅಥವಾ ತೇಜೋವಧೆ ಮಾಡಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ಇದೊಂದು ಕಾಲ್ಪನಿಕ ಕತೆಯಷ್ಟೇ. ರಿಯಾಲಿಟಿ ಶೋಗಳ ಸಬ್ಜೆಕ್ಟ್ ಇರುವ ಕತೆಯಿದು. ಇದನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು’ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

ಮುಂದಿನ ಸುದ್ದಿ
Show comments