ಚೆನ್ನೈ : ನಿರ್ದೇಶಕ ದೇಸಿಂಗ್ ಪೆರಿಯಸಾಮಿ ಕಳೆದ ವರ್ಷ ಬಿಡುಗಡೆಯಾದ ದುಲ್ಕರ್ ಸಲ್ಮಾನ್ ಅವರ ಅಭಿನಯದ ಕಣ್ಣೂಮ್ ಕಣ್ಣೂಮ್ ಕೊಲ್ಲೈಯಾಡಿಥಾಲ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ.
ಇವರು ನಿರಂಜನಿ ಅಹತಿಯಾನ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಅದರಂತೆ ಫೆ. 25ರಂದು ಇವರಿಬ್ಬರು ವಿವಾಹವಾಗಿದ್ದಾರೆ. ನಿರ್ದೇಶಕ ದೇಸಿಂಗ್ ಪೆರಿಯಸಾಮಿ ಮತ್ತು ನಿರಂಜನಿ ಅಹತಿಯಾನ್ ಅವರ ಸುಂದರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!