ರಿಷಬ್, ರಕ್ಷಿತ್ ಸೇರಿದಂತೆ ಶೆಟ್ಟಿ ಗ್ಯಾಂಗ್ ಬಗ್ಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಗೆ ಹೊಟ್ಟೆ ಉರಿನಾ?

Webdunia
ಶುಕ್ರವಾರ, 1 ಡಿಸೆಂಬರ್ 2023 (10:20 IST)
Photo Courtesy: Twitter
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಿಷಬ್, ರಕ್ಷಿತ್ ಶೆಟ್ಟಿ ಮೇಲೆ ನಿರ್ದೇಶಕ ದಯಾಳ್ ಪದ್ಮನಾಭನ್ ಸಂದರ್ಶನವೊಂದರಲ್ಲಿ ಕಿಡಿ ಕಾರಿದ್ದಾರೆ.

ಶೆಟ್ಟಿ ಗ್ಯಾಂಗ್ ಕೇವಲ ತಮ್ಮ ಸರ್ಕಲ್ ಒಳಗೆ ಮಾತ್ರ ಸಿನಿಮಾ ಮಾಡ್ತಾರೆ. ಬೇರೆಯವರಿಗೆ ಅವಕಾಶ ಕೊಡುತ್ತಿಲ್ಲ. ಬೇರೆಯವರನ್ನೂ ಬೆಳೆಸುವ ಕೆಲಸ ಮಾಡಬೇಕು ಎಂದು ದಯಾಳ್ ಪದ್ಮನಾಭನ್ ಕಿಡಿ ಕಾರಿದ್ದರು.

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಿನಿಮಾವೇ ನಡೆಯುತ್ತಿರೋದು ಎಂಬ ಭಾವನೆ ಶೆಟ್ಟಿ ಗ್ಯಾಂಗ್ ನಲ್ಲಿದೆ. ಅದು ಸಹಜ ಕೂಡಾ. ಒಂದು ಮಟ್ಟಿಗೆ ಅದು ನಿಜ ಕೂಡಾ. ಆದರೆ ಅವರ ಒಂದಷ್ಟು ಸ್ನೇಹಿತರೊಳಗೇ ಸಿನಿಮಾ ಮಾಡುತ್ತಿದ್ದರೆ ಹೇಗೆ? ಬೇರೆಯವರಿಗೂ ಅವಕಾಶ ಕೊಡಲಿ ಎಂದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಕಿಡಿ ಕಾರಿದ್ದರು.

ಆದರೆ ಇದಕ್ಕೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ತಮಿಳು ಹಿನ್ನಲೆಯಿಂದ ಬಂದ ದಯಾಳ್ ಕನ್ನಡದಲ್ಲಿ ಎಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ? ಎಷ್ಟು ಜನರನ್ನು ಬೆಳೆಸಿದ್ದಾರೆ? ಈಗ ರಕ್ಷಿತ್, ರಿಷಬ್ ತಮ್ಮದೇ ಸಾಮರ್ಥ್ಯದಿಂದ ಗೆದ್ದರೆ ಹೊಟ್ಟೆ ಉರಿ ಪಡುತ್ತಿದ್ದಾರೆ. ರಿಷಬ್, ರಕ್ಷಿತ್, ರಾಜ್ ಬಿ ಶೆಟ್ಟಿ ಒಳ್ಳೆ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ಜನ ಅವರ ಸಿನಿಮಾ ನೋಡುತ್ತಿದ್ದಾರೆ. ಅವರಿಗೂ ಬೇರೆ ಯಾರೂ ಅವಕಾಶ ಕೊಟ್ಟಿಲ್ಲ. ಅವರ ಸಿನಿಮಾಗಳನ್ನು ಅವರೇ ನಿರ್ಮಿಸಿ, ನಿರ್ದೇಶಿಸಿ ಈ ಮಟ್ಟಿಗೆ ಬೆಳೆದಿದ್ದಾರೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ಮುಂದಿನ ಸುದ್ದಿ
Show comments