ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಮನಸ್ತಾಪದ ಬಗ್ಗೆ ಸಹೋದರ, ನಿರ್ದೇಶಕ ದಿನಕರ ತೂಗುದೀಪ್ ಕೊನೆಗೂ ಮೌನಮುರಿದ್ದಾರೆ.
ನಾವು ಅಣ್ಣ-ತಮ್ಮ ಬೇರೆ ಬೇಗಿ ಆಗಿದ್ದೀವಿ ಅಂತ ಯಾರು ಹೇಳಿದ್ದು? ಫ್ಯಾಮಿಲಿಯಲ್ಲಿ ಚಿಕ್ಕಪುಟ್ಟ ಮನಸ್ತಾಪವಿತ್ತು ಅಷ್ಟೆ. ಹಾಗಂತ ದೂರ ಆಗೋ ಮಾತಿಲ್ಲ ಎಂದು ದರ್ಶನ್ ಜೊತೆಗೆ ಯಾವುದೇ ಮನಸ್ತಾಪ ಇಲ್ಲ ಎಂದು ದಿನಕರ್ ಸ್ಪಷ್ಟನೆ ನೀಡಿದ್ದಾರೆ.
ಗಂಡ-ಹೆಂಡತಿ ಮಧ್ಯೆ ಹೇಗೆ ಜಗಳವೋ, ಹಾಗೆ ಅಣ್ಣ-ತಮ್ಮ ಅಂದ ಮೇಲೆ ಇರುವುದು ಸಾಮಾನ್ಯ. ನಾವು ಮಾತಾಡ್ತಾನೇ ಇರ್ತೀವಿ. ತಿಂಗಳಿಗೊಮ್ಮೆ ಆಗೊಮ್ಮೆ ಈಗೊಮ್ಮೆ ಭೇಟಿಯಾಗ್ತೀವಿ. ಅತ್ತಿಗೆ ಜೊತೆ ಯಾವಾಗಲೂ ಕಾಂಟೆಕ್ಟ್‌ನಲ್ಲಿದ್ದೇನೆ ಎಂದು ರಾಯಲ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ಸಿನಿಮಾಗೆ ದರ್ಶನ್ ಸಾಥ್ ಕೊಡಬಹುದು. ಅವರಿಗೆ ಈಗ ಬೆನ್ನುನೋವಿದೆ. ಅವರ ಚಿಕಿತ್ಸೆಗಾಗಿ ಮೈಸೂರಿಗೆ ಹೋಗಿದ್ದೀವಿ. ಡಾ.ಅಜಯ್ ಹೆಗ್ಡೆ ಎಂಬ ಪ್ರಸಿದ್ಧ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು.
ದರ್ಶನ್ ಜೊತೆ ಸಿನಿಮಾ ಮಾಡೋದು ಖಚಿತ. ಚಿತ್ರಕ್ಕೆ ನಿರ್ಮಾಪಕರ ಲಿಸ್ಟ್ ದರ್ಶನ್ ಕಡೆಗಿದೆ. ದರ್ಶನ್‌ಗೆ ಸಿನಿಮಾ ಮಾಡಬೇಕು ಅಂದಾಗ ಕಥೆ ಕೇಳಲ್ಲ. ದರ್ಶನ್ ನನಗಿಂತ ಇಂಡಸ್ಟ್ರಿಯಲ್ಲಿ ಸೀನಿಯರ್. ಅವರಿಗೆ ಎಲ್ಲವೂ ಗೊತ್ತಿದೆ ಎಂದು ಸಹೋದರನನ್ನು ಸಮರ್ಥಿಸಿಕೊಂಡರು.