Select Your Language

Notifications

webdunia
webdunia
webdunia
webdunia

ದಿಲೀಪ್ ರಾಜ್ ಸಾವಿಗೆ ಮುನ್ನ ನಡೆದಿದ್ದ ವಿಚಾರ ಬಯಲು

Dileep Raj
Photo Credit: X
ಬೆಂಗಳೂರು: ಕನ್ನಡ ಹಿರಿತೆರೆ ಮತ್ತು ಕಿರುತೆರೆ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ. ಅವರ ಹಠಾತ್ ಸಾವಿಗೆ ಮುನ್ನ ನಡೆದ ವಿಚಾರ ಈಗ ಬಯಲಾಗಿದೆ.

ನಟ, ನಿರ್ಮಾಪಕ, ಕಂಠದಾನ ಕಲಾವಿದನಾಗಿ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ 47 ನೇ ವಯಸ್ಸಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಅವರ ಸಾವು ಕುಟುಂಬದವರನ್ನು ಕಂಗೆಡಿಸಿದೆ. ಆರೋಗ್ಯವಾಗಿದ್ದ ದಿಲೀಪ್ ಗೆ ಸಾಯುವಂತದ್ದು ಏನಾಯ್ತು ಎಂದು ಎಲ್ಲರಿಗೂ ಶಾಕ್ ಉಂಟು ಮಾಡಿದೆ.

ನಿನ್ನೆ ರಾತ್ರಿ ಊಟ ಮಾಡಿದ್ದ ಮಲಗಿದ್ದ ದಿಲೀಪ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  ಅವರಿಗೆ ಕೊನೆಯ ಕ್ಷಣದಲ್ಲಿ ಏನಾಯ್ತು ಎಂದು ಪತ್ನಿಯ ತಂದೆ ರಿವೀಲ್ ಮಾಡಿದ್ದಾರೆ. ‘ರಾತ್ರಿ ಊಟ ಮಾಡಿ ಕ್ಲೀನ್ ಆಗಿ ಮಲಗಿದ್ದ. ಬೆಳಿಗ್ಗೆ ಸುಮಾರು 5.30 ಗೆ ತುಂಬಾ ಎದೆ ನೋವು ಬಂದಿದೆ. ಏನೋ ಗರ ಗರ ಸೌಂಡ್ ಬಂತು ಎಂದು ನನ್ನ ಮಗಳು ತಕ್ಷಣವೇ ಎದ್ದು ಬಾಯಿಗೆ ಉಸಿರು ನೀಡಿ ಪ್ರಥಮ ಚಿಕಿತ್ಸೆ ಕೊಡುವ ಪ್ರಯತ್ನ ಮಾಡಿದ್ದಾಳೆ. ಆದರೆ ಪ್ರಯೋಜನವಾಗಿಲ್ಲ’ ಎಂದಿದ್ದಾರೆ.

ಇನ್ನು, ಇಂದು ಬೆಳಿಗ್ಗೆ ವರ್ಷಂಪ್ರತಿ ಮಾಡುವಂತೆ 8 ಗಂಟೆಗೆ ಹೆಲ್ತ್ ಚೆಕಪ್ ಗೆ ಅಪಾಯಿಂಟ್ ಮೆಂಟ್ ಕೂಡಾ ಪಡೆದುಕೊಂಡಡಿದ್ದರಂತೆ. ಆದರೆ ಅಷ್ಟರಲ್ಲಿ ಹೀಗಾಗಿದೆ ಎಂದು ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಾರೂ ನನ್ನ ಕಡೆ ತಿರುಗಿಯೂ ನೋಡಲಿಲ್ಲ, ರವಿಶಂಕರ್ ಗುರೂಜಿ ಆಶ್ರಮದ ಶಾಕಿಂಗ್ ಘಟನೆ ನೆನೆದ ರಜನಿಕಾಂತ್ Video