Select Your Language

Notifications

webdunia
webdunia
webdunia
webdunia

ಕನ್ನಡ ಹಿರಿತೆರೆ, ಕಿರುತೆರೆ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ

Dileep Raj
Photo Credit: Instagram
ಬೆಂಗಳೂರು: ಸ್ಯಾಂಡಲ್ ವುಡ್ ಮತ್ತು ಕನ್ನಡ ಕಿರುತೆರೆ ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ ಎಂಬ ಶಾಕಿಂಗ್ ಸುದ್ದಿ ಬಂದಿದೆ.

ದಿಲೀಪ್ ರಾಜ್ ಗೆ ಹೃದಯಾಘಾತವಾಗಿದ್ದು ತಮ್ಮ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ ಎನ್ನಲಾಗಿದೆ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿದೆ.

ಕಿರುತೆರೆಯಲ್ಲಿ ಕುಂಕುಮ ಭಾಗ್ಯ ಧಾರವಾಹಿ ಮೂಲಕ ಜನಮನ ಗೆದ್ದಿದ್ದ ದಿಲೀಪ್ ರಾಜ್ ಇಷ್ಟು ವರ್ಷಗಳ ಸುದೀರ್ಘ ಪಯಣದಲ್ಲಿ ಸಾಕಷ್ಟು ಧಾರವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಿಲನ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ಗಮನ ಸೆಳೆದಿದ್ದರು.

ಇತ್ತೀಚೆಗೆ ಕಿರುತೆರೆಯಲ್ಲಿ ನಟನೆ ಜೊತೆಗೆ ನಿರ್ಮಾಪಕನಾಗಿಯೂ ಖ್ಯಾತಿ ಪಡೆದಿದ್ದರು. ಅವರು ನಿರ್ಮಿಸಿ, ನಟಿಸಿದ್ದ ಹಿಟ್ಲರ್ ಕಲ್ಯಾಣ ಧಾರವಾಹಿ ಭಾರೀ ಹಿಟ್ ಆಗಿತ್ತು. ಸದ್ಯಕ್ಕೆ ಅವರ ಮೃತದೇಹವನ್ನು ಕುಮಾರಸ್ವಾಮಿ ಲೇಔಟ್ ನ ಅಪೋಲೋ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಗರ್ ಆಗಿ ಪಾದಾರ್ಪಣೆ ಮಾಡಿದ ಶಿಲ್ಪಾ ಗಣೇಶ್‌, ಪಿಚ್ಚರ್ ಚಿತ್ರದ ಗೋಕುಲ ರಾಧೆ ಹಾಡಿಗೆ ಧ್ವನಿ