ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಗೆ ಈಗ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಈ ಪ್ರಕರಣದಲ್ಲಿ ಪ್ರಮುಖ ಕೊಂಡಿಯೆಂದೇ ನಂಬಲಾಗಿರುವ ಅವರ ಮ್ಯಾನೇಜರ್ ಕಮ್ ಡ್ರೈವರ್ ಅಪ್ಪುಣ್ಣಿ ನಾಪತ್ತೆಯಾಗಿದ್ದಾರೆ. ಪೊಲೀಸರು ಕಳೆದ
ಎರಡು ದಿನಗಳಿಂದ ನಾನಾ ರೀತಿಯಲ್ಲಿ ಅಪ್ಪುಣ್ಣಿ ಪತ್ತೆಗಾಗಿ ಬಲೆ ಬೀಸಿದರೂ ಪ್ರಯೋಜನವಾಗಿಲ್ಲ ಎಂದು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.
ಅಪ್ಪುಣ್ಣಿ ಮೂಲಕ ದಿಲೀಪ್ ವ್ಯವಹಾರ ಕುದುರಿಸಿರಬಹುದು ಎಂದು ತನಿಖೆ ವೇಳೆ ಅಂದಾಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಮತ್ತು ತಾಯಿಯನ್ನೂ ಪ್ರಶ್ನಿಸುವ ಸಾಧ್ಯತೆಯಿದೆ. ಸದ್ಯ ಆಲುವಾ ಜೈಲಿನಲ್ಲಿರುವ ದಿಲೀಪ್ ಜಾಮೀನು ಅರ್ಜಿ ವಿಚಾರಣೆ ನಾಳೆ ಇನ್ನೊಮ್ಮೆ ವಿಚಾರಣೆಗೆ ಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ