ಬೆಂಗಳೂರು: ಈ ಸಾರಿ ಅಮ್ಮನ ಸಾವಿನ ಹಿನ್ನಲೆಯಲ್ಲಿ ಬರ್ತ್ ಡೇ ಆಚರಿಸಿಕೊಳ್ಳುವುದಿಲ್ಲ ಎನ್ನುತ್ತಲೇ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಹುಟ್ಟುಹಬ್ಬ ಅರ್ಥಪೂರ್ಣವಾಗಿ ನಡೆದುಹೋಯಿತು.
ಶಿವಣ್ಣ ಎಷ್ಟೇ ಹೇಳಿದರೂ ಕೇಳದ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದರು. ಆದರೆ ಶಿವಣ್ಣ ಮಾತ್ರ ಯಾವುದೇ ಹಾರ ಹಾಕಿಸಿಕೊಳ್ಳದೆ, ಜೈಕಾರ ಹಾಕಿಸಿಕೊಳ್ಳದೆ, ಕೇಕ್ ಕತ್ತರಿಸದೇ ಸರಳವಾಗಿ ಪತ್ನಿ ಜತೆ, ಅಭಿಮಾನಿಗಳ ಮಧ್ಯದಲ್ಲಿ ಬರ್ತ್ ಡೇ ಆಚರಿಸಿಕೊಂಡರು,
ಈ ಸಂದರ್ಭದಲ್ಲಿ ವಿಕಲಚೇತನ, ಅಂಧ ಮಕ್ಕಳ ಜತೆ ಕಾಲ ಕಳೆದರು. ಅಲ್ಲದೆ ತಮ್ಮ ಅಭಿಮಾನಿ ಸಂಘಗಳ ವತಿಯಿಂದ ನಡೆದ ಸಮಾಜಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಬಡ, ವಿಕಲಚೇತನ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು. ಅಲ್ಲದೆ ಅಭಿಮಾನಿಗಳ ಕೈ ಕುಲುಕಿ ಸೆಲ್ಫೀ ತೆಗೆಸಿಕೊಳ್ಳಲು ಅನುವು ಮಾಡಿಕೊಟ್ಟು ಅವರಿಗೂ ಖುಷಿಕೊಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ