Select Your Language

Notifications

webdunia
webdunia
webdunia
webdunia

ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಮಲೆಯಾಳಂ ನಟ ದಿಲೀಪ್ ಅರೆಸ್ಟ್

ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಮಲೆಯಾಳಂ ನಟ ದಿಲೀಪ್ ಅರೆಸ್ಟ್
ತ್ರಿವೇಂದ್ರಂ , ಸೋಮವಾರ, 10 ಜುಲೈ 2017 (19:34 IST)
ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಲೆಯಾಳಂ ಚಿತ್ರರಂಗದ ಖ್ಯಾತ ನಟಿ ದಿಲೀಪ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಜನರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ನಟಿಗೆ ಲೈಂಗಿಕ ಕಿರುಕುಳ ಕೊಡಬೇಕು ಎನ್ನುವ ಸಂಚು ಕೆಲ ವರ್ಷಗಳ ಹಿಂದೆಯೇ ರೂಪಗೊಂಡಿತ್ತು. ಫೆಬ್ರವರಿ 19 ರಂದು ಕೊಚ್ಚಿ ನಗರದ ಬಳಿ ಎರಡನೇ ಬಾರಿ ನಟಿಯ ಮೇಲೆ ದಾಳಿ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ನಿವಾಸದ ಮೇಲೆ ಕೂಡಾ ಪೊಲೀಸರು ದಾಳಿ ನಡೆಸಿದ್ದಾರೆ. ಚಿತ್ರನಿರ್ದೇಶಕ ನಾದಿರ್ಶಾ ಅವರನ್ನು ಕೂಡಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ನಟಿಯನ್ನು ಅಪಹರಿಸಿದ ಗ್ಯಾಂಗ್‌ನ ಸುನೀಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನೀಲ್ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ನಟರ ನೆನೆದು ಶ್ರೀದೇವಿ ಕಣ್ಣೀರಿಟ್ಟಿದ್ದೇಕೆ...?