Select Your Language

Notifications

webdunia
webdunia
webdunia
webdunia

ಪಾಕ್ ನಟರ ನೆನೆದು ಶ್ರೀದೇವಿ ಕಣ್ಣೀರಿಟ್ಟಿದ್ದೇಕೆ...?

ಪಾಕ್ ನಟರ ನೆನೆದು ಶ್ರೀದೇವಿ ಕಣ್ಣೀರಿಟ್ಟಿದ್ದೇಕೆ...?
ಮುಂಬೈ , ಸೋಮವಾರ, 10 ಜುಲೈ 2017 (17:55 IST)
ಮುಂಬೈ:ಶ್ರೀದೇವಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಮಾಮ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷೆನ್ ಕೂಡ ಮಾಡುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದ ಸಂದರ್ಭದಲ್ಲಿ ನಟಿ ಶ್ರೀದೇವಿ ಪಾಕಿಸ್ತಾನಿ ನಟ, ನಟಿಯರಿಬ್ಬರನ್ನು ನೆನೆದು ಕಣ್ಣೀರು ಹಾಕಿರುವುದು ಕುತೂಹಲಗಳ ಜತೆಗೆ ಚರ್ಚೆಗೆ ಕಾರಣವಾಗಿದೆ.
 
ಹಾಗಾದರೆ ಶ್ರೀದೇವಿ ಅಳಲು ಕಾರಣವೇನಪ್ಪಾ ಅಂತ ನೋಡೋದಾದ್ರೆ ಮಾಮ್ ಚಿತ್ರದಲ್ಲಿ ಶ್ರೀದೇವಿ ಜತೆ ಪಾಕಿಸ್ತಾನದ ಅದ್ನಾನ್ ಸಿದ್ಧಿಖಿ, ನಟಿ ಸಜಲ್ ಅಲಿ ಮುಖ್ಯ ಪಾತ್ರವನ್ನು ಪೋಷಿಸಿದ್ದಾರೆ. ಶ್ರೀದೇವಿ ಮಗಳಾಗಿ ಸಜಲ್ ಅಭಿನಯಿಸಿದ್ದು, ಆದರೆ ಇವರು ಸಿನಿಮಾ ಪ್ರಚಾರದ ವೇಳೆ ಪಾಕಿಸ್ತಾನದಿಂದ ಬರಲು ಸದಹ್ಯವಾಗಿಲ್ಲವಂತೆ. ಕಾರಣ ಪಾಕ್ ನಟ-ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಬಗ್ಗೆ ವಿರೋಧವಿರುವ ಕಾರಣ ಅವರು ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿಲ್ಲ.
 
ಚಿತ್ರದಲ್ಲಿನ ಈ ಪಾಕ್ ಕಲಾವಿದರ ಪಾತ್ರಗಳ ಬಗ್ಗೆ ಶ್ಲಾಘಿಸುತ್ತಾ ಭಾವೋದ್ವೇಗಕ್ಕೊಳಗಾದ ಶ್ರೀದೇವಿಗೆ ಕಣ್ಣೀರು ತಡೆಯಲಾಗಲಿಲ್ಲವಂತೆ. ಹಾಗಾಗಿ ಸ್ಟೇಜ್ ಮೇಲೆ ಅತ್ತುಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು, ಈ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲಿಗೆ