ಅಡಿಕೆ ಮರ ಹತ್ತಿದ ದಿಗಂತ್: ಅಡಿಕೆ ಸುಲಿದ ರಂಜಿನಿ ರಾಘವನ್ ಫೋಟೋ ವೈರಲ್

Webdunia
ಬುಧವಾರ, 2 ಡಿಸೆಂಬರ್ 2020 (10:24 IST)
ಬೆಂಗಳೂರು: ಸದ್ಯಕ್ಕೆ ತಮ್ಮ ತವರಿನಲ್ಲಿರುವ ನಟ ದಿಗಂತ್ ಮಂಚಾಲೆ ಅಡಿಕೆ ಮರ ಹತ್ತಿ ಕೊನೆ ಕೊಯ್ಲು ಪೂರ್ತಿ ಮಾಡಿದ್ದಾರೆ! ಇತ್ತ ಇದೇ ನಟಿ ರಂಜಿನಿ ರಾಘವನ್ ಅಡಿಕೆ ಸುಲಿಯುವ ಮಣೆ ಮೇಲೆ ಪಟ್ಟಾಗಿ ಕೂತು ಅಡಿಕೆ ಸುಲಿದು ಸುದ್ದಿ ಮಾಡಿದ್ದಾರೆ!


ಅಷ್ಟಕ್ಕೂ ಇಬ್ಬರೂ ಈ ಕೆಲಸ ಮಾಡಿರುವುದು ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಸಿನಿಮಾ ಶೂಟಿಂಗ್ ಗಾಗಿ. ದಿಗಂತ್ ಜತೆಗೆ ಕಿರುತೆರೆಯ ಖ್ಯಾತ ನಟಿ ರಂಜಿನಿ ರಾಘವನ್ ಕೂಡಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ದಿಗಂತ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅಡಿಕೆ ಕೊಯ್ದು ಗೊನೆ ಸಮೇತ ಫೋಟೋ ಪ್ರಕಟಿಸಿದ್ದು, ಕೊನೆ ಕೊಯ್ಲು ಮುಗಿದಿದೆ ಎಂದು ಬರೆದುಕೊಂಡಿದ್ದಾರೆ. ಅತ್ತ ರಂಜಿನಿ ಅಡಿಕೆ ಸುಲಿಯುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ಅಂದ ಹಾಗೆ ಈ ಸಿನಿಮಾ ತೀರ್ಥಹಳ್ಳಿಯ ಸುತ್ತಮುತ್ತ ನಡೆಯುತ್ತಿರುವ ಕತೆಯಾಗಿದ್ದು, ಪಕ್ಕಾ ಹಳ್ಳಿ ಕೃಷಿಕರ ಕತೆ ಒಳಗೊಂಡಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಧರ್ಮೇಂದ್ರಾ ಶ್ರದ್ಧಾಂಜಲಿ ಸಭೆಗೆ ಹೇಮಾಗೆ ನೋ ಎಂಟ್ರಿ, ಎರಡನೇ ಪತ್ನಿ ಮಕ್ಕಳು ಮಾಡಿದ್ದೇನೂ ಗೊತ್ತಾ

ಜೈಲಿನಲ್ಲಿ ಈಗ ದರ್ಶನ್ ಗೆ ನರಕದರ್ಶನ: ಈ ಎಲ್ಲಾ ಕೆಲಸ ಮಾಡಬೇಕು ದಾಸ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ಮುಂದಿನ ಸುದ್ದಿ
Show comments