Publish Date: Mon, 24 Jul 2017 (12:15 IST)
Updated Date: Mon, 24 Jul 2017 (12:17 IST)
ಬೆಂಗಳೂರು: ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯ ವೈಭವವನ್ನು ನೋಡಿದ್ದೇವೆ. ಆದರೆ ಇದೀಗ ನಿಜ ಜೀವನದಲ್ಲೇ ಪೊಲೀಸ್ ಅಧಿಕಾರಿಯಾಗಿ ಮಿಂಚಿದ ಡಿಐಜಿ ರೂಪಾ ಅವರ ಕತೆ ಸದ್ಯದಲ್ಲೇ ಬೆಳ್ಳಿ ತೆರೆಗೆ ಬರಲಿದೆಯಂತೆ!
ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳನ್ನು ಬಯಲಿಗೆಳೆದ ನಂತರ ಜನ ಸಾಮಾನ್ಯರ ಪಾಲಿಗೆ ಹೀರೋಯಿನ್ ಆದ ಐಪಿಎಸ್ ಅಧಿಕಾರಿ ಡಿಐಜಿ ರೂಪಾ ಸಾಹಸಗಾಥೆಗಳನ್ನು ತೆರೆಯ ಮೇಲೆ ಸಿನಿಮಾ ರೂಪದಲ್ಲಿ ತರಲು ನಿರ್ದೇಶಕ ಎಎಂಆರ್ ರಮೇಶ್ ಸಿದ್ಧತೆ ನಡೆಸಿದ್ದಾರೆ.
‘ಸೈನೈಡ್’ ಸಿನಿಮಾ ಖ್ಯಾತಿಯ ನಿರ್ದೇಶಕ ರಮೇಶ್ ಪರಪ್ಪನ ಜೈಲಿನ ಅಕ್ರಮ ಮತ್ತು ಐಪಿಎಸ್ ಅಧಿಕಾರಿ ರೂಪಾ ಬಗ್ಗೆ ತಮ್ಮ ಸಿನಿಮಾದಲ್ಲಿ ಹೇಳಲಿದ್ದಾರಂತೆ. ಅಲ್ಲಿನ ಅಕ್ರಮಗಳ ಮಾಹಿತಿ ತನಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಡಿಐಜಿ ರೂಪಾ ಅನುಮತಿ ಪಡೆದು ಚಿತ್ರ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ