Publish Date: Mon, 24 Jul 2017 (11:51 IST)
Updated Date: Mon, 24 Jul 2017 (11:55 IST)
ಬೆಂಗಳೂರು: ಸಂಜು ಮತ್ತು ನಾನು ಧಾರವಾಹಿಯ ಸೆಟ್ ನಲ್ಲಿ ನಡೆದ ಗಲಾಟೆ ಬಗ್ಗೆ ನಿರ್ದೇಶಕರು ಪ್ರಥಮ್ ಪರವಾಗಿ ಮಾತನಾಡಿದ್ದಾರೆಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ಭುವನ್ ಆರೋಪಿಸಿದ್ದಾರೆ.
ಇನ್ನೂ 12 ದಿನಗಳ ಶೂಟಿಂಗ್ ಬಾಕಿಯಿದೆ. ಅದರಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿದಿದೆ. ಆದರೆ ಪ್ರಥಮ್ ಭಾಗದ ಚಿತ್ರೀಕರಣ ಮುಗಿದಿಲ್ಲ. ಅದೇ ಕಾರಣಕ್ಕೆ ಅವರ ಧಾರವಾಹಿ ಚಿತ್ರೀಕರಣ ಮುಗಿಸಬೇಕೆಂಬ ಉದ್ದೇಶಕ್ಕಾಗಿ ನಿರ್ದೇಶಕರು ಪ್ರಥಮ್ ಪರವಾಗಿ ಮಾತನಾಡುತ್ತಿರಬಹುದು.
ಈ ಎಲ್ಲಾ ಘಟನೆಗಳು ನಡೆಯುವಾಗ ನಿರ್ದೇಶಕರು ಅಲ್ಲಿಯೇ ಇದ್ದರು. ಈಗ ಅವರು ಯಾಕೆ ಘಟನೆ ಬಗ್ಗೆ ನನಗೆ ಹೆಚ್ಚಿನ ವಿವರಗಳೇ ಇಲ್ಲ ಎಂದಿದ್ದಾರೋ ಗೊತ್ತಿಲ್ಲ ಎಂದು ಖಾಸಗಿ ವಾಹಿನಿಗೆ ಹೇಳಿದ್ದಾರೆ. ವಿನಾಕಾರಣ ಕಿರಿ ಕಿರಿ ತೆಗೆದು ಇನ್ನೊಬ್ಬರನ್ನು ರೊಚ್ಚಿಗೆಬ್ಬಿಸುವುದೇ ಪ್ರಥಮ್ ಅಭ್ಯಾಸ ಎಂದು ಭುವನ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ