Webdunia - Bharat's app for daily news and videos

Install App

ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ಮೇಲೂ ಡ್ರಗ್ ಆರೋಪ!

Webdunia
ಶನಿವಾರ, 29 ಆಗಸ್ಟ್ 2020 (13:29 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ದಂಧೆ ಬಗ್ಗೆ ಆರೋಪ ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿದೆ. ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಿರಂಜೀವಿ ಸರ್ಜಾ ಸಾವಿಗೆ ಡ್ರಗ್ ಸೇವನೆ ಕಾರಣವಾಗಿತ್ತು ಎಂದು ಪರೋಕ್ಷವಾಗಿ ಆರೋಪ ಮಾಡಿದ ಬೆನ್ನಲ್ಲೇ ಸರ್ಜಾ ಕುಟುಂಬದ ಆಪ್ತ ಪ್ರಶಾಂತ್ ಸಂಬರ್ಗಿ ಶರ್ಮಿಳಾ ಮಾಂಡ್ರೆ ಮೇಲೆ ಆರೋಪ ಮಾಡಿದ್ದಾರೆ.


ಇತ್ತೀಚೆಗೆ ಸಾವನ್ನಪ್ಪಿದ ಯುವ ನಟನ ಸಾವಿಗೂ ಡ್ರಗ್ ಕಾರಣವಾಗಿತ್ತು ಎಂದು ಇಂದ್ರಜಿತ್ ಪರೋಕ್ಷವಾಗಿ ಚಿರಂಜೀವಿ ಮೇಲೆ ಆರೋಪ ಮಾಡಿದ್ದರು. ಈ ಬಗ್ಗೆ ಖಾಸಗಿ ಚಾನೆಲ್ ಒಂದಕ್ಕೆ ಪ್ರತಿಕ್ರಿಯಿಸಿದ ಚಿರು ಸರ್ಜಾ ಮಾವ ಸುಂದರ್ ರಾಜ್ ನಮ್ಮ ಕುಟುಂಬಕ್ಕೆ ಮತ್ತಷ್ಟು ನೋವು ಕೊಡಬೇಡಿ. ಅಂತಹ ಯಾವುದೇ ದುರಾಭ್ಯಾಸಗಳೂ ಇರಲಿಲ್ಲ. ಪರೀಕ್ಷೆಯೂ ನಡೆದಿರಲಿಲ್ಲ ಎಂದಿದ್ದಾರೆ.

ಇಂದ್ರಜಿತ್ ಈ ರೀತಿ ಆರೋಪ ಮಾಡಿದ ಬೆನ್ನಲ್ಲೇ ಪ್ರಶಾಂತ್ ಸಂಬರ್ಗಿ ಶರ್ಮಿಳಾ ಮಾಂಡ್ರೆಗೆ ಇತ್ತೀಚೆಗೆ ಆಗಿದ್ದ ಅಪಘಾತ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಲಾಕ್ ಡೌನ್ ವೇಳೆ ಶರ್ಮಿಳಾ ಮಧ್ಯರಾತ್ರಿಯಲ್ಲಿ ಹೊರಗೆ ಹೋಗಿ ಕಾರು ಅಪಘಾತ ಮಾಡಿದ್ದರು. ಆ ವೇಳೆ ಅವರ ಜತೆಗೆ ಡ್ರಗ್ ಪೆಡ್ಲರ್ ಇದ್ದ. ಇದರ ಬಗ್ಗೆ ಯಾಕೆ ತನಿಖೆ ಮಾಡಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಇತ್ತ ತಮ್ಮ ಮೇಲೆ ಆರೋಪ ಬರುತ್ತಿದ್ದಂತೇ ವಿಡಿಯೋ ಸಂದೇಶ ಮೂಲಕ ಸ್ಪಷ್ಟನೆ ನೀಡಿದ ಶರ್ಮಿಳಾ ನಮ್ಮ ಕುಟುಂಬದವರೂ ಸಿನಿಮಾ ರಂಗದಲ್ಲೇ ಇದ್ದವರು. ನಮಗೆ ಯಾರಿಗೂ ಇಂತಹ ಅಭ್ಯಾಸಗಳಿಲ್ಲ. ನನ್ನ ಮೇಲೆ ಆರೋಪ ಮಾಡಿರುವುದು ನೋಡಿದರೆ ನಿಜಕ್ಕೂ ಶಾಕಿಂಗ್ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

₹69ಕೋಟಿ ವಂಚನೆ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಮಾಲೀಕತ್ವದ ರೆಸ್ಟೋರೆಂಟ್‌ ಇದೇನಾಯಿತು

ಹ್ರಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಹೃದಯವಂತಿಕೆಗೆ ಮನಸೋತ ಪವನ್ ಕಲ್ಯಾಣ್

ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು

ಸಾನ್ವಿ ಸುದೀಪ್ ಬಾಯಲ್ಲಿ ತಪ್ಪಿಯೂ ಕನ್ನಡ ಇಲ್ಲ: ಟ್ರೋಲ್ ಆದ ಕಿಚ್ಚನ ಮಗಳ ಸಂದರ್ಶನ

ಊಟ ಎಸೆಯುತ್ತಾರೆ, ಶೂ ಕಾಲಿನಲ್ಲೇ ಬರ್ತಾರೆ: ದರ್ಶನ್ ಕಂಪ್ಲೇಂಟ್ ಒಂದಾ ಎರಡಾ

ಮುಂದಿನ ಸುದ್ದಿ
Show comments