ಕಿರಿಕ್ ಪಾರ್ಟಿ ಹೆಸರು ಹೇಳಿ ಟಾಂಗ್ ಕೊಟ್ಟರಾ ರಶ್ಮಿಕಾ ಮಂದಣ್ಣ?!

Webdunia
ಮಂಗಳವಾರ, 31 ಡಿಸೆಂಬರ್ 2019 (09:07 IST)
ಬೆಂಗಳೂರು: ಕೊಡಗಿನ ಬೆಡಗಿ, ಈಗ ತೆಲುಗು, ತಮಿಳಿನಲ್ಲೂ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಸಿನಿಮಾ ಜೀವನಕ್ಕೆ ಕಾಲಿಟ್ಟು ಮೂರು ವರ್ಷವಾಗಿದೆ. ನಿನ್ನೆ ಈ ಸಂಭ್ರಮವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಚರಿಸಿಕೊಂಡಿದ್ದಾರೆ.


ಈ ಹಿನ್ನಲೆಯಲ್ಲಿ ರಶ್ಮಿಕಾಗೆ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಒಬ್ಬರು ರಶ್ಮಿಕಾ ಹಿಟ್ ಸಿನಿಮಾಗಳ ಪಟ್ಟಿ ಮಾಡಿ ವಿಶ್ ಮಾಡಿದ್ದಾರೆ. ಆದರೆ ಇದರಲ್ಲಿ ಕನ್ನಡ ಸಿನಿಮಾಗಳ ಹೆಸರಿಲ್ಲ. ಈ ಶುಭಾಷಯಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ಹಿಟ್ ಲಿಸ್ಟ್ ನಲ್ಲಿ ಕಿರಿಕ್ ಪಾರ್ಟಿ ಹೆಸರನ್ನೂ ಸೇರಿಸಿ ಎಂದು ಕಣ್ಣು ಮಿಟುಕಿಸುವ ಸ್ಮೈಲಿ ಪ್ರಕಟಿಸಿದ್ದಾರೆ. ಇದು ಕನ್ನಡದ ಹೆಸರಿನಲ್ಲಿ ತಮ್ಮನ್ನು ಟ್ರೋಲ್ ಮಾಡುವವರಿಗೆ ರಶ್ಮಿಕಾ ಕೊಟ್ಟ ಟಾಂಗ್ ಇರಬಹುದು ಎನ್ನಲಾಗಿದೆ.

ರಶ್ಮಿಕಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕೆಲವರು ಯಾವತ್ತೂ ಏರಿದ ಏಣಿಯನ್ನು ಮರಿಯಬೇಡ. ಕನ್ನಡದ ಕಿರಿಕ್‍ ಪಾರ್ಟಿಯಿಂದಾಗಿಯೇ ನೀನು ಈವತ್ತು ಈ ರಂಗದಲ್ಲಿ ಇಷ್ಟು ಬೆಳೆದಿದ್ದ ಎನ್ನುವುದನ್ನು ಮರೆಯಬೇಡ ಎಂದು ಕಾಮೆಂಟ್ ಮಾಡಿದ್ದಾರೆ. ಅಂತೂ ಈ ಮೂರು ವರ್ಷದ ಸಿನಿ ಕೆರಿಯರ್ ನಲ್ಲಿ ರಶ್ಮಿಕಾ ಸಿನಿಮಾ ಸುದ್ದಿಯಾದಷ್ಟೇ ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ ಎನ್ನುವುದಂತೂ ಸತ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments