Select Your Language

Notifications

webdunia
webdunia
webdunia
webdunia

15 ನಿಮಿಷದ ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಂಡ ಧ್ರುವಸರ್ಜಾ; ಅಂದಹಾಗೇ, ಆ ಪಾತ್ರವೇನು ಗೊತ್ತಾ...?

15 ನಿಮಿಷದ ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಂಡ ಧ್ರುವಸರ್ಜಾ; ಅಂದಹಾಗೇ, ಆ ಪಾತ್ರವೇನು ಗೊತ್ತಾ...?
ಬೆಂಗಳೂರು , ಶುಕ್ರವಾರ, 26 ಜನವರಿ 2018 (08:43 IST)
ಬೆಂಗಳೂರು : ನಂದ ಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ನಟ ಧ್ರುವ ಸರ್ಜಾ ಅವರು ನಟಿಸುತ್ತಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಕೂಡ ನಡೆದಿದೆ. ಈ ಚಿತ್ರದಲ್ಲಿ ಬರುವ 15 ನಿಮಿಷದ ಪಾತ್ರಕ್ಕಾಗಿ ಧ್ರುವ ಸರ್ಜಾ ಅವರು 30 ಕೆಜಿ ತೂಕ ಇಳಿಸಿದ್ದಾರಂತೆ.

 
ಸಾಮಾನ್ಯವಾಗಿ ಸಿನಿಮಾದಲ್ಲಿ ನಾಯಕ ನಟನ ಬಾಲ್ಯ ಜೀವನದ ಸ್ಟೋರಿ ಬಂದರೆ ಆ ಪಾತ್ರಕ್ಕೆ ಬಾಲ ನಟರನ್ನು ಬಳಸಿಕೊಳ್ಳುತ್ತಾರೆ. ಈ ಚಿತ್ರತಂಡವೂ ಕೂಡ ಅದೇ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೆ ಧ್ರುವ ಸರ್ಜಾ ಅವರೆ ಆ ಪಾತ್ರವನ್ನು ನಿರ್ವಹಿಸುವುದಾಗಿ ಹೇಳಿ ಬರೋಬರಿ 30 ಕೆಜಿ ತೂಕ ಇಳಿಸಿಕೊಂಡು 7ನೇ ತರಗತಿಯ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಈ  ಕಾರ್ಯವನ್ನು ನಿರ್ದೇಶಕ ನಂದ ಕಿಶೋರ್ ಅವರು ಕೂಡ ಮೆಚ್ಚಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರಣ್ ಜೋಹರ್ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದ್ದು ಯಾಕೆ...?