ಅಣ್ಣ ಚಿರಂಜೀವಿ ಸರ್ಜಾ ರಾಜಮಾರ್ತಂಡ ಸಿನಿಮಾಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ

ಭಾನುವಾರ, 28 ಜೂನ್ 2020 (09:18 IST)
ಬೆಂಗಳೂರು: ಅಕಾಲಿಕವಾಗಿ ಅಣ್ಣ ಚಿರಂಜೀವಿ ಸರ್ಜಾ ನಿಧನರಾಗಿದ್ದರಿಂದ ಅವರ ಅರ್ಧಕ್ಕೇ ನಿಂತ ಸಿನಿಮಾಗಳಿಗೆ ಸಹಾಯ ಮಾಡಲು ಸಹೋದರ ಧ್ರುವ ಸರ್ಜಾ ಮುಂದಾಗಿದ್ದಾರೆ.


ಚಿರು ಸರ್ಜಾ ಕೊನೆಯದಾಗಿ ಅಭಿನಯಿಸಿದ್ದ ರಾಜಮಾರ್ತಂಡ ಸಿನಿಮಾ ಡಬ್ಬಿಂಗ್ ಕೆಲಸಗಳು ಬಾಕಿಯಿತ್ತು. ಚಿತ್ರೀಕರಣ ಪೂರ್ತಿಯಾಗಿತ್ತು.

ಹೀಗಾಗಿ ಈಗ ಈ ಸಿನಿಮಾಗೆ ಚಿರು ಪಾತ್ರಕ್ಕೆ ಸಹೋದರ ಧ್ರುವ ಸರ್ಜಾ ಡಬ್ಬಿಂಗ್ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಆ ಮೂಲಕ ಅಣ್ಣನ ಕೊನೆಯ ಚಿತ್ರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿದ್ದಾರೆ ಧ್ರುವ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪುನೀತ್ ನಿರ್ಮಾಣದ ಸಿನಿಮಾ ‘ಲಾ’ದಲ್ಲಿದೆ ಥ್ರಿಲ್ಲಿಂಗ್ ಕತೆ!