Select Your Language

Notifications

webdunia
webdunia
webdunia
webdunia

ಹೆಂಡತಿ ಮಕ್ಕಳೊಂದಿಗೆ ಮಾರ್ಟಿನ್ ಸಕ್ಸಸ್ ಖುಷಿ ಹಂಚಿಕೊಂಡ ಧ್ರುವ ಸರ್ಜಾ

Dhruva Sarja

Krishnaveni K

ಬೆಂಗಳೂರು , ಶನಿವಾರ, 12 ಅಕ್ಟೋಬರ್ 2024 (15:22 IST)
ಬೆಂಗಳೂರು: ಮಾರ್ಟಿನ್ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಬಂದ ಬೆನ್ನಲ್ಲೇ ನಾಯಕ ನಟ ಧ್ರುವ ಸರ್ಜಾ ತಮ್ಮಪತ್ನಿ ಮಕ್ಕಳೊಂದಿಗೆ ಚಿಕ್ಕದಾಗಿ ಸಕ್ಸಸ್ ಪಾರ್ಟಿ ಮಾಡಿಕೊಂಡಿದ್ದಾರೆ.

ಪತ್ನಿ ಪ್ರೇರಣಾ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರ ಜೊತೆ ಧ್ರುವ ಸೆಲೆಬ್ರೇಷನ್ ಮಾಡಿದ್ದಾರೆ. ಕೇಕ್ ಕತ್ತರಿಸಿ ಕುಟುಂಬಸ್ಥರಿಗೆ ಹಂಚಿ ಖುಷಿಪಟ್ಟಿದ್ದಾರೆ. ಮಾರ್ಟಿನ್ ಸಿನಿಮಾ ಮೊನ್ನೆಯಷ್ಟೇ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಬಂದಿತ್ತು.

ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದವರೂ ಇದ್ದಾರೆ. ಅಬ್ಬರವೇ ಅತಿಯಾಯ್ತು, ಕತೆಯಲ್ಲಿ ಹೊಸತನವಿಲ್ಲ ಎಂದು ಆಪಾದಿಸಿದವರಿದ್ದಾರೆ. ಹಾಗಿದ್ದರೂ ಬಹಳ ದಿನಗಳ ನಂತರ ಬಿಡುಗಡೆಯಾದ ಧ್ರುವ ಸರ್ಜಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರ್ಮಾಪಕರ ಜೇಬಿಗೆ ತೊಂದರೆ ಮಾಡಿಲ್ಲ.

ಧ್ರುವ ಸಿನಿಮಾ ಮೊದಲ ದಿನ 6.20 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಪರಭಾಷೆಗಳಲ್ಲಿ ನಿರೀಕ್ಷಿಸಿದಷ್ಟು ಕಮಾಯಿ ಬಂದಿಲ್ಲ. ಆದರೆ ಕನ್ನಡದಲ್ಲಿ 5 ಕೋಟಿ ವರೆಗೆ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ದಸರಾ ನಿಮಿತ್ತ ರಜೆಯೂ ಇರುವುದರಿಂದ ವೀಕೆಂಡ್ ನಲ್ಲಿ ಉತ್ತಮ ಗಳಿಕೆಯಾಗುವ ವಿಶ್ವಾಸದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಳ್ಳೆಯತನದ ಎದುರು ಕೆಟ್ಟತನ ನಶ್ವರ: ವಿಜಯಲಕ್ಷ್ಮಿ ದರ್ಶನ್ ಫೋಸ್ಟ್ ಹಿಂದಿರುವ ಮರ್ಮವೇನು