Publish Date: Sun, 10 Apr 2022 (18:43 IST)
Updated Date: Sun, 10 Apr 2022 (18:45 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್ ಸಿನಿಮಾ ರಿಲೀಸ್ ದಿನಾಂಕ ಬಹಿರಂಗವಾಗಿದೆ.
ರಾಮ ನವಮಿ ದಿನವಾದ ಇಂದು ಮಾರ್ಟಿನ್ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಇದೇ ವರ್ಷ ಸೆಪ್ಟೆಂಬರ್ 30 ರಂದು ಸಿನಿಮಾ ತೆರೆಗೆ ಬರಲಿದೆ.
ಚಿತ್ರೀಕರಣ ಹಂತದಲ್ಲಿರುವ ಮಾರ್ಟಿನ್ ನಲ್ಲಿ ಧ್ರುವ ಸರ್ಜಾ ಭರ್ಜರಿ ಆಕ್ಷನ್ ದೃಶ್ಯಗಳಿರಲಿವೆ. ವೈಭವಿ ಶಾಂಡಿಲ್ಯ ಧ್ರುವಾಗೆ ನಾಯಕಿಯಾಗಿದ್ದಾರೆ.